ಚಾಮರಾಜನಗರ: ಜಿಲ್ಲೆಯ ನಂಜೇದೇವನಪುರ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ಪೈಕಿ, ಮತ್ತೊಂದು 10 ತಿಂಗಳ ಗಂಡು ಹುಲಿ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಣಿಸಿಕೊಂಡಿದ್ದ ಹುಲಿ ಸಂಕುಲವನ್ನು ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ಸಹಾಯದೊಂದಿಗೆ ಭಾರಿ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಇಂದು ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಹುಲಿ ಮರಿಗೆ ಅರವಳಿಕೆ ಚುಚ್ಚುಮದ್ದುನೀಡುವ ಮೂಲಕ ಅದನ್ನು ವಶಕ್ಕೆ ಪಡೆದಿದ್ದಾರೆ. ಇದೇ ತಂಡದಲ್ಲಿದ್ದ ತಾಯಿ ಹುಲಿ ಹಾಗೂ ಒಂದು ಹೆಣ್ಣು ಹುಲಿ ಮರಿಯನ್ನು ಈಗಾಗಲೇ ಸೆರೆಹಿಡಿಯಲಾಗಿತ್ತು.
ಒಟ್ಟು ನಾಲ್ಕು ಮರಿಗಳ ಪೈಕಿ ಈಗ ಎರಡು ಮರಿಗಳು ಸೆರೆಯಾವೆ. ಇನ್ನುಳಿದ ಎರಡು ಹುಲಿ ಮರಿಗಳು ಆನೆಮಡುವಿನ ಕೆರೆಯ ಹಿಂಭಾಗದ ಪೊದೆಗಳಲ್ಲಿ ಅಡಗಿರುವ ಸಾಧ್ಯತೆ ಇದ್ದು, ಅವುಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಂಡಿದೆ.


