ಬೆಳಗಾವಿ: ನದನದಲ್ಲಿ ಹೃಹಲಕ್ಷ್ಮಿ ಗದ್ದಲ ಜೋರಾಗಿದ್ದು, ಗೃಹಲಕ್ಷ್ಮಿ ಹಣ ಬಾಕಿ ವಿಚಾರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಮಾಹಿತಿ ನೀಡಿದ್ಧಾರೆ..
ಗೃಹಲಕ್ಷ್ಮಿ ಹಣದ ಬಗ್ಗೆ ಮಾಹಿತಿ ನೀಡಲು ವಿಕ್ಷಗಳು ಪಟ್ಟು ಹಿಡಿದಿದ್ದು, ಸದನದಲ್ಲಿ ಬಾವಿಗಳಿದು ಪ್ರತಿಭಟನೆ ನಡೆಸಿದ್ದರು.. ಬಳಿಕ ಕಲಾಪಕ್ಕೆ ಬಂದ ಮಹಿಳಾ ಹಾಗೂ ಮಕ್ಕಳ ಆಯೋಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರು 2 ತಿಂಗಳ ಗೃಹ ಲಕ್ಷ್ಮಿ ಹಣ ರಿಲೀಸ್ ಆಗಿಲ್ಲ ಎಂದು ಹೇಳುವ ಮೂಲಕ ತಪ್ಪೊಪ್ಪಿಕೊಂಡಿದ್ದಾರೆ.
ಸದನಲ್ಲಿ ಮಾತಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರು, ಮೊನ್ನೆ ಮಹೇಶ್ ಟೆಂಗಿನಕಾಯಿ ಪ್ರಶ್ನೆ ಕೇಳಿದ್ರು. ಅದಕ್ಕೆ ನಾನು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಅವತ್ತಿನ ಹೇಳಿಕೆಗೆ ಇವಾಗ್ಲೂ ನಾನು ಬದ್ದ. ಇಲ್ಲಿವರೆಗೆ 23 ಕಂತುಗಳನ್ನು ಹಾಕಿದ್ದೇವೆ ಎಂದ್ರು.
ಈ ವೇಳೆ ವಿಪಕ್ಷ ನಾಯಕರು ಮಾರ್ಚ್, ಫೆಬ್ರವರಿ ತಿಂಗಳಲ್ಲಿ ಹಣ ಹಾಕಿಲ್ಲ ಎಂದು ಪದೇ ಪದೇ ಕೇಳಿದ್ರು. ಇದಕ್ಕೆ ಉತ್ತರಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಸದನದ ಸದಸ್ಯರಿಗೆ ತಪ್ಪು ಮಾಹಿತಿ ಕೊಡೋದಾಗಲಿ. ಸದನವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿಲ್ಲ. ಎರಡು ತಿಂಗಳ ಹೆಚ್ಚು ಕಡಿಮೆ ಆಗಿದೆ. ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನನನ್ನ ಮಾತಿಂದ ಯಾರಿಗಾದ್ರೂ ಬೇಜಾರ್ ಆಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರು, ಇದು ಯಶಸ್ವಿ ಯೋಜನೆ. ವಿಪಕ್ಷ ನಾಯಕರಿಗೂ ಮನವಿ ಮಾಡ್ತೇನೆ. ನಾವು ಗೃಹಲಕ್ಷ್ಮಿ ಯೋಜನೆ ಹಣ ತಲುಪಿಸೋ ಕೆಲಸ ಮಾಡ್ತೇವೆ. ನನ್ನ ಮಾಹಿತಿ ಪ್ರಕಾರ ಕೊಟ್ಟಿದ್ದೇವೆ ಅಂತ ಇತ್ತು.
ಆರ್ಥಿಕ ಇಲಾಖೆ ಜೊತೆ ಮಾತಾಡ್ತೇನೆ. ಹಣ ಹೋಗದಿದ್ರೆ ಹಾಕಲು ಹೇಳ್ತೇನೆ. ಹಾಗಂತ ಹಣ ಬೇರೆ ಕಡೆ ಹೋಗಿದೆ ಅಂತ ಅಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿಯವರೆಗೂ 23 ಕಂತುಗಳನ್ನು ಹಾಕಿದ್ದೇವೆ. 46000 ಕೋಟಿ ಹಣವನ್ನು 1 ಕೋಟಿ 26 ಲಕ್ಷ ಮಹಿಳೆಯರಿಗೆ ಡಿಬಿಟಿ ಮೂಲಕ ಕೊಡಲಾಗಿದೆ ಎಂದು ತಿಳಿಸಿದ್ದಾರೆ.


