ಚೆನ್ನೈ: ತಮಿಳು ಚಲನಚಿತ್ರೋದ್ಯಮದ ಶಿಲ್ಪಿ, ನಿರ್ಮಾಣ ಸಂಸ್ಥೆಯ ಎವಿಎಂ ಸ್ಟುಡಿಯೋಸ್‌ನ ಮಾಲೀಕ ಎಂ. ಸರವಣನ್ (86 ) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಸಾವನ್ನಪ್ಪಿದ್ದಾರೆ.. ಸರವಣನ್ ಅವರ ಪಾರ್ಥಿವ ಶರೀರಕ್ಕೆ ಸಿನಿಮಾ ರಂಗದ ನಿರ್ದೇಶಕರು, ನಟರು, ತಾಂತ್ರಿಕ ವರ್ಗದವರು ಮತ್ತು ಅಸಂಖ್ಯಾತ ಅಭಿಮಾನಿಗಳು ಕೊನೆಯ ಗೌರವ ಸಲ್ಲಿಸಲಿದ್ದಾರೆ.1939 ರಲ್ಲಿ ಜನಿಸಿದ ಸರವಣನ್ ತನ್ನ ತಂದೆ ಎ.ವಿ. ಮೇಯಪ್ಪನ್ ಅವರ ನಿಧನದ ಬಳಿಕ 1979 ರಿಂದ ಎವಿಎಂ ಸ್ಟುಡಿಯೋಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.ಸರವಣನ್ ಅವರನ್ನು ತಮಿಳು ಚಿತ್ರರಂಗದ ಆಧಾರ ಸ್ತಂಭಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಈ ಸಂಸ್ಥೆ ಹಲವು ಐಕಾನಿಕ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಎಂ ಸರವಣನ್ ಅವರ ಪುತ್ರ ಎಂ.ಎಸ್. ಗುಹಾನ್ ಕೂಡ ನಿರ್ಮಾಪಕರಾಗಿದ್ದಾರೆ. ಅವರ ನಿಧನಕ್ಕೆ ನಟ ರಜಿನಿಕಾಂತ್, ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


