ಬೆಂಗಳೂರು: ಪ್ರೀಯಕರನ ಕಿರುಕುಳಕ್ಕೆ ಬೇಸತ್ತು ಹಾಸನ ಮೂಲದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ.. 22 ವರ್ಷದ ಅಚಲ ಆತ್ಮಹತ್ಯೆಗೆ ಶಾರಣಾದ ಯುವತಿ.. ಘಟನೆ ನಡೆದು 10 ದಿನಗಳು ಕಳೆದ್ರೂ ಆರೋಪಿಯನ್ನು ಬಂಧಿಸಿಲ್ಲ ಎಂದ ಅಚಲ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ಧಾರೆ..
ಇಂಜಿನಿಯರಿಂಗ ಮುಗಿಸಿದ ಅಚಲ ಮಯಾಂಕ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಅಲ್ಲದೇ ಮಯಾಂಕ್ ಮದುವೆಗೂ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಡ್ರಗ್ ಅಡಿಕ್ಟ್ ಆಗಿದ್ದ ಮಯಾಂಕ್ ಪದೇ ಪದೇ ಸಂಪರ್ಕಕ್ಕೆ ಪೀಡಿಸುತ್ತಿದ್ದ. ಇದಕ್ಕೆ ಅಚಲ ಒಪ್ಪದಿದ್ದಕ್ಕೆ ದೈಹಿಕ ಹಲ್ಲೆ ನಡೆಸಿ ಮಾನಸಿಕವಾಗಿಯೂ ಕಿರುಕುಳ ಕೊಡ್ತಿದ್ದ. ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಚಲ ತಾಯಿ ಕಣ್ಣೀರಿಟ್ಟಿದ್ದಾರೆ.
ನವೆಂಬರ್ 21 ರಂದು ಬೆಂಗಳೂರಿನ ಪಾಂಡುರಂಗ ನಗರದಲ್ಲಿ ಅಚಲ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ನಡೆದು ಹತ್ತು ದಿನ ಕಳೆದ್ರೂ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಯುವತಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಮಯಾಂಕ್ ಎಂಬಾತ ಮೃತ ಯುವತಿ ಅಚಲ ತನ್ನ ದೂರದ ಸಂಬಂಧಿಯೇ ಆಗಿದ್ದನಂತೆ. ದೈಹಿಕ ಸಂಬಂಧಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.ಇನ್ನು ಮೃತ ಯುವತಿ ನಟಿ ಆಶಿಕಾ ರಂಗನಾಥ್ ಮಾವನ ಮಗಳು ಎಂದು ಹೇಳಲಾಗುತ್ತಿದೆ..


