ಚೆನ್ನೈ: ತಮಿಳುನಾಡಿನಲ್ಲಿ ಎರಡು ಖಾಸಗಿ ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ, 6 ಮಂದಿ ಸಾವನ್ನಪ್ಪಿದ್ದು, 28 ಜನರು ಗಾಯಗೊಂಡಿರುವ ಘಟನೆ ತೇಂಕಾಸಿ ಜಿಲ್ಲೆಯಲ್ಲಿ ನಡೆದಿದೆ..
ಒಂದು ಬಸ್ ಮದುರೈನಿಂದ ಸೆಂಕೊಟ್ಟೆಗೆ ತೆರಳುತ್ತಿದ್ದು, ಮತ್ತೊಂದು ಬಸ್ ತೇಂಕಾಸಿಯಿಂದ ಕೋವಿಲ್ಪಟ್ಟಿಗೆ ಹೋಗುತ್ತಿತ್ತು. ಇಡೈಯಕ್ಕಲ್ನ ದುರೈಸಾಮಿಪುರಂ ಎಂಬಲ್ಲಿ ಎರಡೂ ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ…
ಎರಡು ಬಸ್ಸುಗಳಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ 6 ಮಂದಿ ಸಾವನ್ನಪ್ಪಿದ್ದಾರೆ. 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತೇಂಕಾಸಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕ ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.


