ಹೈದರಾಬಾದ್: ಸಾವು ಯಾರಿಗೆ ಹೇಗೆ ಬರುತ್ತದೆ ಎಂದು ಹೇಳಲು ಅಸಾದ್ಯ. ಕೇಲವೊಬ್ಬರಿಗೆ ಇಷ್ಟು ಚಿಕ್ಕ ವಿಚಾರಕ್ಕೆ ಸಾಯುವ ಅವಶ್ಯಕತೆ ಏನು ಇತ್ತು ಎಂದು ಅನ್ನಿಸುತ್ತದೆ.
ಇನ್ನು ಕೇಲವರಿಗೆ ಅದು ಜೀವವೇ ಹೋಗುವ ವಿಷಯವಾಗಿರುತ್ತದೆ.. ಅಂತದ್ದೆ ಒಂದು ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ಇರುವೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮನೀಷಾ (25) ಮೃತ ದುರ್ದೈವಿ.
ಮನೀಷಾ ಅವರು ಕೆಲವು ತಿಂಗಳಿನಿಂದ ‘ಮೈರ್ಮೆಕೊಫೋಬಿಯಾ’ ಎನ್ನುವ ಅಸಾಧ್ಯ ಭಯದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇರುವೆ ಕಂಡರೆ ಆಕೆಯ ಹೃದಯ ಬಡಿತ ಹೆಚ್ಚಾಗಿ, ಉಸಿರುಗಟ್ಟಿ, ಕೈಕಾಲು ನಡುಗುತ್ತಿತ್ತು. ಕುಟುಂಬಸ್ಥರು ಆಕೆಯನ್ನು ಹೈದರಾಬಾದ್‌ನ ಹಲವು ಆಸ್ಪತ್ರೆಗಳಿಗೆ ಕರೆದೊಯ್ದಿದ್ದರು. ಮನೋವೈದ್ಯರ ಕೌನ್ಸೆಲಿಂಗ್, ಔಷಧಗಳು, ಧ್ಯಾನ ತರಗತಿಗಳು ಎಲ್ಲವೂ ಪ್ರಯತ್ನಿಸಿದ್ದರು. ಆದರೆ ಭಯದ ದೆವ್ವ ಆಕೆಯನ್ನು ಬಿಡಲಿಲ್ಲ.
ಮಹಿಳೆಗೆ 2022ರಲ್ಲಿ ವಿವಾಹವಾಗಿದ್ದರು. ಮೂರು ಮಕ್ಕಳಿದ್ದಾರೆ. ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಮನೀಷಾ ತಮ್ಮ 3 ವರ್ಷದ ಮಗಳು ಅನ್ವಿಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಪತಿ ಸಂಜೆ ಹಿಂದಿರುಗಿದಾಗ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಅವರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು.
ಸ್ಥಳದಲ್ಲಿ ಸಿಕ್ಕಿ ಆತ್ಮಹತ್ಯಾ ಪತ್ರದಲ್ಲಿ ಕ್ಷಮಿಸಿ ನಾನು ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಜಾಗರೂಕರಾಗಿರಿ ಎಂದು ಬರೆದಿದ್ದಳು. ಪೊಲೀಸರು ಹೇಳಿರುವ ಪ್ರಕಾರ, ಆಕೆಗೆ ಬಾಲ್ಯದಿಂದಲೂ ಇರುವೆಗಳ ಭಯ ಇತ್ತು. ಮನೆಯನ್ನು ಶುಚಿಗೊಳಿಸುವಾಗ ಇರುವೆಗಳನ್ನು ನೋಡಿರಬಹುದು ಮತ್ತು ಭಯದಿಂದ ಈ ತಪ್ಪು ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಿದ್ದಾರೆ.


