ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗೇ ಆಗ್ತಾರೆ, ಸದ್ಯಕ್ಕೆ ಪಕ್ಷದ ಅಧ್ಯಕ್ಷನಾಗಿ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡ್ತಿದ್ದಾರೆ ಎಂದು ಡಿಸಿಎಂ ಬ್ರದರ್ ಡಿ.ಕೆ ಸುರೇಶ್ ಹೇಳಿದ್ದಾರೆ.. ಪವರ್ ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಅಣ್ಣ ಡಿ.ಕೆ. ಶಿವಕುಮಾರ್ರನ್ನ ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ನನಗೂ ಇದೆ. ಅವರ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ..
ಮುಂದಿನ ಚುನಾವಣೆಯಲ್ಲಿ ನಿಲ್ಲುವುದಾಗಿ ಸಿದ್ದರಾಮಯ್ಯ ಪರೋಕ್ಷ ಘೋಷಣೆ ಬಗ್ಗೆಯೂ ಮಾತಾಡಿದ ಸುರೇಶ್, 98-95 ವಯಸ್ಸು ಆಗಿರುವವರೂ ಇನ್ನೂ ರಾಜಕೀಯದಲ್ಲಿ ಇದ್ದಾರೆ. ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದ್ರೆ ಒಳ್ಳೆಯದೇ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರವು ಐದು ವರ್ಷಗಳ ಕಾಲ ಆಡಳಿತ ನಡೆಸಲು ಜನರಿಂದ ಬಹುಮತ ಪಡೆದಿದೆ. ಕಾಂಗ್ರೆಸ್ ಈಗ ಪಕ್ಷೇತರರು ಸೇರಿ 140 ಸ್ಥಾನಗಳನ್ನು ಹೊಂದಿದೆ. ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ನೀಡಿದ ಭರವಸೆಗಳನ್ನು ಈಡೇರಿಸುವುದು ಪ್ರಮುಖವಾಗಿದೆ. ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ. ಆಡಳಿತದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅವರು ತಿಳಿಸಿದರು.
ಇನ್ನು ರಾಹುಲ್ ಗಾಂಧಿಯವರ ರಾಜ್ಯಕ್ಕೆ ಬರುವ ವಿಚಾರ ಗೊತ್ತಿಲ್ಲ, ಈ ಬಗ್ಗೆ ಸಿಎಂ, ಡಿಸಿಎಂ ಗಮನ ಹರಿಸ್ತಾರೆ ಎಂದ್ರು. ಕಾಂಗ್ರೆಸ್ ಭವನಗಳ ಬಗ್ಗೆ ಪಕ್ಷದ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮಾಹಿತಿ ನೀಡ್ತಾರೆ. ನವಂಬರ್ 15ರ ಕ್ರಾಂತಿಯ ಬಗ್ಗೆ ಮಾಹಿತಿ ಇಲ್ಲ . ನವಂಬರ್ ಅಂದ್ರೆ ನನಗೆ ನೆನಪಾಗೋದು ಕನ್ನಡ ರಾಜ್ಯೋತ್ಸವ ಮಾತ್ರ, ಈ ವರ್ಷ ಅದ್ದೂರಿಯಾಗಿ ಮಾಡೋಣ ಎನ್ನುತ್ತಾ ಡಿಕೆ ಸುರೇಶ್ ಮಾತು ತೇಲಿಸಿದ್ರು.
ಇನ್ನು ಹೆಚ್ಚುವರಿ ಡಿಸಿಎಂಗಳ ನೇಮಕ ವಿಚಾರ ಎಲ್ಲರ ಸಲಹೆಗಳನ್ನು ಹೈಕಮಾಂಡ್ ಗಮನಿಸುತ್ತದೆ. ಇಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗೋದಿಲ್ಲ ಎಂದು ಸುರೇಶ್ ಹೇಳಿದ್ದಾರೆ. ದಲಿತ ಸಿಎಂ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವ್ರು, ದಲಿತ ಸಿಎಂ ವಿಚಾರ ಸ್ವಾಗತಾರ್ಹವಾಗಿದ್ದು, ಸಮಾವೇಶ ಮಾಡೋದು ಒಳ್ಳೆಯದು ಎಂದಿದ್ದಾರೆ.
ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಯಾರಿಗೂ ವಿರೋಧ ಇಲ್ಲ , ಆದ್ರೆ ದೊಣ್ಣೆ ಹಿಡಿದು ಪಥಸಂಚಲನ ಸರಿಯಲ್ಲ. ಇತರೆ ಸಮುದಾಯಗಳೂ ಅದೇ ರೀತಿ ಮಾಡಿದ್ರೆ? ಮೊದಲು ಚೆಡ್ಡಿ ಹಾಕಿಕೊಳ್ತಿದ್ರು, ಈಗ ಪ್ಯಾಂಟ್ ಹಾಕಿಕೊಳ್ತಿದ್ದಾರೆ ಎಂದು ಸುರೇಶ್ ಕಿಡಿಕಾರಿದ್ರು..


