Sunday, December 7, 2025
21.2 C
Bengaluru
Google search engine
LIVE
ಮನೆರಾಜ್ಯಒಬ್ಬರ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಇಬ್ಬರು ಸಹೋದರರು

ಒಬ್ಬರ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಇಬ್ಬರು ಸಹೋದರರು

ಮೈಸೂರು: ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನ ಕಾಪಾಡಲು ಹೋಗಿ ಇಬ್ಬರು ಸಹೋದರರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಜಿಲ್ಲೆಯ ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ.. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ ನಂದನ್ (25), ರಮೇಶ್ ಸಹೋದರನ ಪುತ್ರ ರಾಕೇಶ್ (20) ಜೀವ ಕಳೆದುಕೊಂಡವರು.

ಈ ಇಬ್ಬರು ಸಹೋದರರ ಮಕ್ಕಳು ಆಗಿದ್ದಾರೆ. ಮಂಜು ಎನ್ನುವ ಬಾಲಕ ನಿನ್ನೆ ಸಂಜೆ ವರಣ ನಾಲೆಯಲ್ಲಿ ಈಜಲು ಹೋಗಿದ್ದನು. ಈ ವೇಳೆ ನೀರಿನಲ್ಲಿ ಮಂಜು ಮುಳುಗುತ್ತಿರುವುದನ್ನು ನೋಡಿದ್ದರು. ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಸಹೋದರರು ತಕ್ಷಣ ನೀರಿಗೆ ಹಾರಿ ಮುಳುಗುತ್ತಿದ್ದವನನ್ನ ರಕ್ಷಣೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ನಂದನ್, ರಾಕೇಶ್ ನೀರು ಪಾಲಾಗಿದ್ದಾರೆ. ಮೃತ ನಂದನ್, ರಾಕೇಶ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು ಸಂಬಂಧದಲ್ಲಿ ಸಹೋದರರು ಆಗುತ್ತಾರೆ.

ಕೇವಲ ಹದಿನೈದು ದಿನಗಳ ಹಿಂದೆಯಷ್ಟೇ ನಂದನ್ ಪ್ರೀತಿಸಿ ಮದುವೆಯಾಗಿದ್ದನು. ಚನ್ನಪಟ್ಟಣ ಮೂಲದ ಯುವತಿಯೊಂದಿಗೆ ವಿವಾಹವಾಗಿದ್ದನು. ಮಕ್ಕಳನ್ನು ಕಳೆದುಕೊಂಡ ಎರಡು ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ವರುಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments