ಬೆಂಗಳೂರು: ಟನಲ್ ರೋಡ್ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಖಾಲಿ ಡಬ್ಬ ಎಂದು ಟೀಕಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ ಹಿರಿಯ ರಾಜಕಾರಣಿ. ಅನುಭವ ಇದ್ದವ್ರು. ವೈಯಕ್ತಿಕ ಟೀಕೆ ಮಾಡೋದಿಲ್ಲ ಎಂದು ಹೇಳಿದ್ದಾರೆ..
ಇನ್ನು ಸುರಂಗ ಯೋಜನೆ ಪರ್ಯಾಯ ಯೋಜನೆಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವುದಾಗಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ನಿನ್ನೆ, ಡಿಸಿಎಂ ಅವರು ಬೆಂಗಳೂರಿನ ಕಾರ್ಯ ಯೋಜನೆ ಬಗ್ಗೆ ಕೇಳಿದರು. ಅವರು ಪರ್ಯಾಯ ಪರಿಹಾರಗಳನ್ನು ಕೇಳಿದ್ದಾರೆ. ಈ ನಿಟ್ಟಿನಲ್ಲಿ, ಬೆಂಗಳೂರು ತನ್ನ ಸಂಚಾರ ದಟ್ಟಣೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತು ಆಲೋಚನೆಗಳನ್ನು ಪ್ರಸ್ತುತಪಡಿಸಲು ನಾನು ಅವರ ಕಚೇರಿಯಿಂದ ಅರ್ಧ ಗಂಟೆ ಸಮಯ ಕೇಳಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಟನಲ್ ರೋಡ್ ಯೋಜನೆಯ ಬಗ್ಗೆ ಡಿಸಿಎಂ ಅವರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಅನಿಸುತ್ತೆ. ಈ ಯೋಜನೆಯಿಂದ ಸ್ಯಾಂಕಿ ಕೆರೆ, ಲಾಲ್ ಬಾಗ್ ಪ್ರದೇಶಕ್ಕೆ ಹಾನಿಯಾಗಲಿದೆ. ಮಾಡೇ ಮಾಡ್ತೀನಿ ಅಂತ ಜಿದ್ದಿಗೆ ಬೀಳೋದು ತಪ್ಪು. ಟನಲ್ ಯೋಜನೆ ಬೇಡ ಅಂತ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಲೇಖಕ, ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಂಗಳವಾರ ಬರಲಿದ್ದು, ನಾನೇ ವಾದ ಮಂಡಿಸಲಿದ್ದೇನೆ ಎಂದು ಹೇಳಿದರು.


