Wednesday, November 19, 2025
21.2 C
Bengaluru
Google search engine
LIVE
ಮನೆದೇಶ/ವಿದೇಶರಾಜ್ಯಸಭಾ ಸಂಸದರಿಗೆ ಹಂಚಲಾಗಿದ್ದ ಅಪಾರ್ಟ್‌ಮೆಂಟ್‌ಗಳಲ್ಲಿ ಬೆಂಕಿ ಅವಘಡ

ರಾಜ್ಯಸಭಾ ಸಂಸದರಿಗೆ ಹಂಚಲಾಗಿದ್ದ ಅಪಾರ್ಟ್‌ಮೆಂಟ್‌ಗಳಲ್ಲಿ ಬೆಂಕಿ ಅವಘಡ

ನವದೆಹಲಿ: ಸಂಸತ್​​​ ಸದಸ್ಯರಿಗೆ ಹಂಚಿಕೆಯಾದ ಬ್ರಹ್ಮಪುತ್ರ ಫ್ಲ್ಯಾಟ್​​ ಗಳಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.. ಸಂಸತ್​ ಭವನದಿಂದ 200 ಮೀಟರ್​​​​​​ ದೂರದಲ್ಲಿರುವ ಈ ಕಟ್ಟಡದಲ್ಲಿ ಲೋಕಸಭಾ ಹಾಗೂ ರಾಜ್ಯಸಭಾ ಸಂಸದರು ವಾಸಿಸುತ್ತಿದ್ದಾರೆ.. ಸ್ಥಳದಲ್ಲಿ ಅಗ್ನಿಶಾಮಕ ತಂಡಗಳು ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

ಮಧ್ಯಾಹ್ನ 1:20 ಕ್ಕೆ ಅಗ್ನಿಶಾಮಕ ಇಲಾಖೆಗೆ ಬೆಂಕಿಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಪಾರ್ಟ್ಮೆಂಟ್‌ನಲ್ಲಿರುವ ಅಗ್ನಿಶಾಮಕ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಟ್ಯಾಂಕ್ ಮತ್ತು ಪೈಪ್‌ಲೈನ್‌ಗಳಲ್ಲಿ ನೀರಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೆಂಕಿಯಿಂದ ಅಪಾರ್ಟ್‌ಮೆಂಟ್‌ ಕೆಳಗಿನ ಎರಡು ಮಹಡಿಗಳಿಗೆ ಭಾರಿ ಹಾನಿಯಾಗಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments