Wednesday, November 19, 2025
21.2 C
Bengaluru
Google search engine
LIVE
ಮನೆಕ್ರಿಕೆಟ್ತಮ್ಮ ಗರ್ಲ್‌ ಫ್ರೆಂಡ್‌ ಪರಿಚಯಿಸಿದ ಹಾರ್ದಿಕ್ ಪಾಂಡ್ಯ

ತಮ್ಮ ಗರ್ಲ್‌ ಫ್ರೆಂಡ್‌ ಪರಿಚಯಿಸಿದ ಹಾರ್ದಿಕ್ ಪಾಂಡ್ಯ

ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿಕೊಳ್ಳುತ್ತಿದ್ದರು. ಹಾರ್ದಿಕ್​ ಅವರ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಬೀಚ್ ಸೈಡ್‌ನಲ್ಲಿ ತೆಗೆದ ಫೋಟೋಗಳು ಮತ್ತು ನೈಟ್ ಔಟ್ ಮೊಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

2024ರ ಟಿ20 ವಿಶ್ವಕಪ್ ಗೆಲುವಿನ ನಂತರ ಅವರ ವೈಯಕ್ತಿಕ ಜೀವನದಲ್ಲಿ ಬಂದ ಬಿರುಗಾಳಿ ಎಲ್ಲರಿಗೂ ಗೊತ್ತೇ ಇದೆ. ನಟಿ ನತಾಶಾ ಸ್ಟಾಂಕೋವಿಚ್ ಅವರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ, ಹಾರ್ದಿಕ್ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿಕೊಳ್ಳುತ್ತಿದ್ದರು.

ಹಾರ್ದಿಕ್ ಪಾಂಡ್ಯ ಶನಿವಾರ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಾಂಡ್ಯ ಇನ್‌ಸ್ಟಾಗ್ರಾಮ್ ಸ್ಟೋರೀಸ್ ಮೂಲಕ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದ ಆಚರಣೆಯ ಒಂದು ನೋಟವನ್ನು ನೀಡಿದರು. ಅವರು ಮಹೀಕಾ ಶರ್ಮಾ ಅವರೊಂದಿಗೆ ದಿನವನ್ನು ಕಳೆದರು.

ಪೋಸ್ಟ್​ನ ಮೊದಲ ಸ್ಲೈಡ್​​ನಲ್ಲಿ ಹ್ಯಾಪಿ ಬರ್ತ್​​ಡೇ ಸಂದೇಶದೊಂದಿಗೆ ಅಲಂಕರಿಸಲ್ಪಟ್ಟ ಚಾಕೊಲೇಟ್​​ ಕೇಕ್ ಇತ್ತು. ಎರಡನೇ ಸ್ಲೈಡ್​​ನಲ್ಲಿ ಹಾರ್ದಿಕ್ ಅವರ ಫೋಟೋ ಇತ್ತು. ಮೂರನೇ ಸ್ಲೈಡ್​ನಲ್ಲಿ ಅಚ್ಚರಿ ಒಂದು ಇಣುಕು ನೋಟ ಇತ್ತು. ನಾಲ್ಕನೇ ಸ್ಲೈಡ್​ನಲ್ಲಿ ಹಾರ್ದಿಕ್ ಮತ್ತು ಮಹೀಕಾ ವಿಡಿಯೋ ಇತ್ತು. ಅಂತಿಮ ಸ್ಲೈಡ್ ಹಾರ್ದಿಕ್ ಮತ್ತು ಮಹೀಕಾ ಕಡಲತೀರದ ಉದ್ದಕ್ಕೂ ಒಟ್ಟಿಗೆ ದೀರ್ಘ ನಡಿಗೆಯನ್ನು ಆನಂದಿಸುವ ಪ್ರಶಾಂತ ಕ್ಷಣ ಅದಾಗಿದೆ.

ಟೀಮ್​ ಇಂಡಿಯಾದಿಂದ ವಿಶ್ರಾಂತಿ ಪಡೆದಿರುವ ಹಾರ್ದಿಕ್​ ಪಾಂಡ್ಯ ವಿದೇಶ ಪ್ರವಾಸದಲ್ಲಿದ್ದಾರೆ. 2 ದಿನದ ಹಿಂದೆ ಮಹೈಕಾ ಶರ್ಮಾ ಜೊತೆಗೆ ವಿದೇಶದಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಬರ್ತ್​​ ಡೇ ಸೆಲಬ್ರೇಷನ್​ನ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments