Thursday, November 20, 2025
22.5 C
Bengaluru
Google search engine
LIVE
ಮನೆರಾಜಕೀಯನವೆಂಬರ್ ಇಲ್ಲವೇ ಡಿಸೆಂಬರ್​​​ಗೆ ಸಿಎಂ ಚೇಂಜ್ ಫಿಕ್ಸ್- ಅಶೋಕ್​​

ನವೆಂಬರ್ ಇಲ್ಲವೇ ಡಿಸೆಂಬರ್​​​ಗೆ ಸಿಎಂ ಚೇಂಜ್ ಫಿಕ್ಸ್- ಅಶೋಕ್​​

ಬೆಳಗಾವಿ: ಎರಡೂವರೆ ವರ್ಷ ಆದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ಒಪ್ಪಂದ ಆಗಿರುವುದು ನಿಜ. ನವಂಬ‌ರ್ ಅಥವಾ ಡಿಸೆಂಬರ್ ನೊಳಗೆ ಮುಖ್ಯಮಂತ್ರಿ ಬದಲಾವಣೆ ಆಗುವುದು ಫಿಕ್ಸ್​ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಹೇಳಿದ್ದಾರೆ..

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪಟ್ಟದಿಂದ ಸಿದ್ದರಾಮಯ್ಯ ಇಳಿಯೋದು ಫಿಕ್ಸ್. ಈಗಾಗಲೇ ಅಧಿಕಾರಕ್ಕಾಗಿ ಜಗಳ ಆರಂಭವಾಗಿದೆ. ಸಿದ್ದರಾಮಯ್ಯ ಅವರದ್ದು ಅಧಿಕಾರ ಬಿಟ್ಟುಕೊಡುವ ಜಾಯಮಾನ ಅಲ್ಲ. ಆದರೆ ಡಿ ಕೆ ಶಿವಕುಮಾರ ಹಠ ಬಿಡುವುದಿಲ್ಲ.

ಎರಡೂವರೆ ವರ್ಷ ಆದ ಮೇಲೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ಒಪ್ಪಂದ ಆಗಿರುವುದು ನಿಜ. ಆದರೆ ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ವ್ಯಕ್ತಿಯಲ್ಲ. ಈ ಅಧಿಕಾರ ಜಗಳ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇಡೀ ಪಕ್ಷ ಮಂತ್ರಿ ಮಂಡಲದ ರಚನೆಯಲ್ಲಿದೆ. ಎಲ್ಲಾ ಶಾಸಕರು ನಾನು ಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ಇದನ್ನೆಲ್ಲ ನೋಡಿದರೆ ಈ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ಕಾಸಿನ ಬೆಲೆಯೂ ಇಲ್ಲ ಎಂದು ಅಶೋಕ ವಾಗ್ದಾಳಿ ನಡೆಸಿದರು. ಒಂದು ವೇಳೆ ಈ ಸರಕಾರ ಬಿದ್ದುಹೋದರೆ ನಾವು ಹಿಂದಿನಂತೆ ಸರಕಾರ ರಚನೆ ಮಾಡುವ ಆಸಕ್ತಿ ಹೊಂದಿಲ್ಲ. ಬದಲಾಗಿ ಚುನಾವಣೆಗೆ ಹೋಗುವ ತಯಾರಿ ಮಾಡುತ್ತೇವೆ ಎಂದು ಅಶೋಕ ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments