ಈಗಿನ ಜನರೇಷನ್ನಲ್ಲಿ ಬ್ರೇಕ್ ಅನ್ನೋದು ಕಾಮನ್ ಆಗಿ ಬಿಟ್ಟಿದೆ.. ಆದರೆ ಎಲ್ಲರೂ ಅದನ್ನ ಸುಲಭವಾಗಿ ತೆಗೆದುಕೊಳ್ಳೋದಿಲ್ಲ.. ಕೆಲವರು ಆ ಬೇಸರದಿಂದ ಹೊರ ಬರಲು ತಕ್ಷಣ ಬೇರೆ ಹುಡುಗಿಯ ಜೊತೆ ಕಮಿಟ್ ಆಗುತ್ತಾರೆ, ಇನ್ನು ಕೆಲವರು ತಮ್ಮ ಮನಸ್ಸನ್ನು ಗುಣಪಡಿಸಲು ಸಮಯ ತೆಗೆದುಕೊಳ್ಳುತ್ತಾರೆ. ಬ್ರೇಕ್‌ಅಪ್ ನಂತರ ತಕ್ಷಣದ ಬೇರೆ ಸಂಬಂಧ ಹುಡುಕುವುದು ಸರಿನಾ..? ತಪ್ಪಾ..? ಎಂಬುದು ಎಲ್ಲರಿಗೂ ಗೊಂದಲವಾಗಿಯೇ ಇರುತ್ತದೆ.. ಆ ಕುರಿತ ಮಾಹಿತಿ ಇಲ್ಲಿದೆ:

ಬೇರೆ ಪ್ರೀತಿ ಸಂಬಂಧಕ್ಕೆ ಇಳಿಯುವ ಮೊದಲು ಯೋಚಿಸಬೇಕಾದ ಅಂಶಗಳು: ದೂರವಾದ ತಕ್ಷಣ ಹೊಸ ಸಂಬಂಧ ಆರಂಭಿಸುವ ಮೊದಲು, ನಿಮ್ಮ ಮನಸ್ಸಿನ ಸ್ಥಿತಿಯನ್ನು ಪರಿಶೀಲಿಸುವುದು ಮುಖ್ಯ. ಬಿಟ್ಟು ಹೋದ ಗೆಳೆಯ/ಗೆಳತಿಯ ಹಳೆಯ ನೆನಪುಗಳು ಇನ್ನೂ ಮನಸ್ಸಲ್ಲಿ ಕಾಡುತ್ತಿದ್ದರೆ, ಹೊಸ ಸಂಬಂಧ ಬೆಳೆಸುವುದು ಕಷ್ಟ.. ಆಗ ಇಬ್ಬರು ನೆಮ್ಮದಿಯಿಂದ ಇರಲು ಸಾಧ್ಯವಾಗುವುದಿಲ್ಲ..

ಹಳೆಯ ಪ್ರೀತಿಯ ನೆನಪುಗಳನ್ನು ನೀವು ಬಲವಂತವಾಗಿ ಮರೆಮಾಡಲು ಪ್ರಯತ್ನಿಸುವುದರಿಂದ ಹೊಸ ಸಂಬಂಧವು ಬಲಿಷ್ಠವಾಗುವುದಿಲ್ಲ. ಮೊದಲು ಹಳೆ ಪ್ರೀತಿಯನ್ನು ಸಂಪೂರ್ಣ ಮರೆತು ನಂತರ ಹೊಸ ಪ್ರೀತಿಯನ್ನು ಮುಂದುವರೆಸುವುದು ಉತ್ತಮ.. ನಿಧಾನವಾಗಿ ಗುಣಮುಖಗೊಳ್ಳುವುದರಿಂದ ಮುಂದಿನ ಸಂಬಂಧಕ್ಕೆ ಆರೋಗ್ಯಕರ ಆಧಾರ ಸಿಗುತ್ತದೆ.

ಹೊಸ ಲವ್ ಲೈಫ್ ಸಂಬಂಧದ ರೋಮಾಂಚಕ ಆರಂಭವು ಕೆಲವೊಮ್ಮೆ ನಿಧಾನವಾಗಿಯೂ ಸಮಾಧಾನ ನೀಡಬಹುದು. ಆದರೆ, ಈ ಉತ್ಸಾಹವು ನಿಜವಾದ ಪ್ರೀತಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ದೀರ್ಘಕಾಲದ ಸಂಬಂಧಕ್ಕಾಗಿ ಭಾವನಾತ್ಮಕ ಸ್ಪಷ್ಟತೆ ಅಗತ್ಯ.

ಯಾವುದೇ ಹೊಸ ಸಂಬಂಧದ ಬಲವು ನಂಬಿಕೆ ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿರುತ್ತದೆ. ನಿಜವಾದ ಒಪ್ಪಿಗೆಯಿಲ್ಲದೆ ಪ್ರಾರಂಭವಾಗುವ ಪ್ರೀತಿಯು ಸ್ವಲ್ಪ ಸಮಯದ ಬಳಿಕ ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ..

ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ನಂತರ ಮಾತ್ರ ಹೊಸ ಸಂಬಂಧವನ್ನು ನಿಧಾನವಾಗಿ ಕಟ್ಟಿಕೊಳ್ಳುವುದು ಉತ್ತಮ. ತುರ್ತು ನಿರ್ಧಾರಗಳು ಭವಿಷ್ಯದಲ್ಲಿ ನೋವನ್ನು ಉಂಟುಮಾಡಬಹುದು. ಸಮಯ ನೀಡಿ, ಭಾವನೆಗಳು ಸ್ಥಿರವಾದ ನಂತರ ಮಾತ್ರ ಮುಂದುವರಿಯುವುದು ಉತ್ತಮ.


