ಸಂಗಾಂತಿ ಜೊತೆ ಪ್ರೀತಿಯ ಜೀವನ ಮುಂದುವರೆಯ ಬೇಕಂದ್ರೆ, ಪ್ರಣಯ ಯಶಸ್ವಿಯಾಗಬೇಕಾದ್ರೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಕಾಳಜಿ ತುಂಬಾ ಮುಖ್ಯ. ಆದರೆ ಕೆಲವು ಸಂದರ್ಭಗಳಲ್ಲಿ, ಹುಡುಗ ಅಥವಾ ಹುಡುಗಿ ತನ್ನ ಗೆಳೆಯ/ಗೆಳತಿ ಮೇಲಿನ ಆಸಕ್ತಿ ನಿಧಾನವಾಗಿ ಕಳೆದುಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ, ಕೆಲವು ನಡವಳಿಕೆಗಳು ಕ್ಲಿಯರ್ ಆಗಿ ಗೊಚರಿಸುತ್ತದೆ.. ಅವನ/ಅವಳ ಸಂಬಂಧವನ್ನ ಉಳಿಸಿಕೊಳ್ಳಬೇಕಾ.. ಅಥವಾ ಬೇರೆ ನಿರ್ಧಾರಗಳನ್ನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ..

ಯಾವಾಗಲೂ ಪ್ರೀತಿಯಿಂದ ಮುದ್ದಿಸುತ್ತಿದ್ದ ಗೆಳಯ/ಗೆಳತಿ ಸಡನ್ ಆಗಿ ಅಭಸ್ಯವಾಗಿ ಮಾತನಾಡುತ್ತಿದ್ದಾರೆ ಅಂದ್ರೆ, ಅರ್ಥ ಮಾಡಿಕೊಳ್ಳಿ ಇವರಿಗೆ ನಿಮ್ಮ ಮೇಲಿನ ಇಂಟ್ರೆಸ್ಟ್ ಕಮ್ಮಿ ಆಗುತ್ತಿದೆ ಎಂದರ್ಥ.. ಜೊತೆಗೆ ನಿಂದನೀಯವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ ಎಂದರೆ ಕನ್ಪರ್ಮ್ ಅವರ ನಿಮ್ಮ ಮೇಲಿನ ಇಂಟ್ರೆಸ್ಟ್ /ಸಂಬಂಧದಲ್ಲಿನ ಆಸಕ್ತಿಯನ್ನ ಕಳೆದುಕೊಂಡಿರುವುದಕ್ಕೆ ಇದು ಪ್ರಮುಖ ಸೂಚನೆಯಾಗಿರಬಹುದು. ಮಾತು-ಮಾತಲ್ಲೂ ಕೋಪ, ಕಿರಿಕಿರಿ ಹೆಚ್ಚಾಗಿದ್ದರೆ, ಜೊತೆಗೆ ಕೆಲವೊಂದು ಬಾರಿ ಬೇಕು ಅಂತಾನೇ ಉದ್ದೇಶಪೂರ್ವಕವಾಗಿ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದರೆ. ನಿಮ್ಮ ಜೊತೆ ಸಮಯ ಕಳೆಯುವುದನ್ನು ತಪ್ಪಿಸಿಕೊಳ್ಳುತ್ತಿದ್ದರೆ.. ಅವರಿಗೆ ನಿಮ್ಮ ಮೇಲೆ ಆಸಕ್ತಿ ಕಡಿಮೆಯಾಗಿದೆ ಎಂದರ್ಥ..ಸಂಬಂಧದಲ್ಲಿ ಪ್ರೀತಿ ಜೀವಂತವಾಗಿ ಇರಬೇಕಂದ್ರೆ ಒಟ್ಟಿಗೆ ಸಮಯ ಕಳೆಯುವುದು ಅಗತ್ಯ. ಆದರೆ ನಿಮ್ಮ ಆಸಕ್ತಿಯೇ ಇಲ್ಲವಾದರೇ ಬೇರೆ-ಬೇರೆ ಕಾರಣ ಹೇಳಿಕೊಂಡು ಸಮಯ ಕಳೆಯುವುದನ್ನು ತಪ್ಪಿಸಿಕೊಳ್ಳುತ್ತಾರೆ.

ಹುಡುಗ/ಹುಡುಗಿಯ ಮೇಲೆ ಪ್ರೀತಿ ತೋರಿಸುವುದು ಜೀವನದಲ್ಲಿ ತುಂಬಾ ಇಂಪಾರ್ಟೆಂಟ್.. ಜೊತೆಗೆ ಆರೋಗ್ಯಕರ ಸಂಬಂಧದ ಲಕ್ಷಣವೂ ಕೂಡ ಹೌದು. ಆದರೆ ಗೆಳೆಯ/ಗೆಳತಿ ಅಪ್ಪುಗೆ, ಚುಂಬನ, ಮಾತುಕತೆ ಇದಾವುದು ಕಾಣಿಸದಿದ್ದರೆ, ಅವನ ಮನಸ್ಸಿನಲ್ಲಿ ಪ್ರೀತಿ ಕಡಿಮೆಯಾಗಿರುವುದನ್ನು ತೋರಿಸುತ್ತದೆ.

ಸಂಬಂಧದಲ್ಲಿ ಗೆಳೆಯ/ಗೆಳತಿಯ ಅಗತ್ಯತೆಗಳನ್ನು ಪೂರೈಸುವುದು ಹುಡುಗ ಅಥವಾ ಹುಡುಗಿಯ ಇಬ್ಬರ ಕರ್ತವ್ಯ.. ಆದರೆ ಯಾವಾಗಲೂ ಕಾರಣಗಳನ್ನೇ ಹೇಳಿಕೊಂಡು ಜವಾಬ್ದಾರಿಯಿಂದು ದೂರವಾಗುತ್ತಿದ್ದಾರೆ ಯಾವುದೇ ಪ್ರೀತಿ ಉಳಿಯಲು ಸಾಧ್ಯವಿಲ್ಲ.. ಮತ್ತು ಆ ಪ್ರೀತಿಯನ್ನು ಮುಂದುವರೆಸುವ ಅಗತ್ಯ ಇಬ್ಬರಿಗೂ ಇರುವುದಿಲ್ಲ..

ಲವ್ ಲೈಫ್ನಲ್ಲಿ ಪ್ರೀತಿಯ ಸಂಬಂಧ ಚೆನ್ನಾಗಿ ಇರಬೇಕಾದ್ರೆ ಸಂಭಾಷಣೆ ತುಂಬಾ ಮುಖ್ಯ. ಆದರೆ ದಿನಪೂರ್ತಿ ಯಾವುದೇ ಪೋನ್ ಕಾಲ್ ಅಥವಾ ಮೇಸೆಜ್ಗೆ ಪ್ರತಿಕ್ರಿಯಿಸದಿದ್ದರೆ ಅಲ್ಲಿ ಪ್ರೀತಿಯ ಪ್ರಯಣ ಮುಂದುವರೆಸಲು ಇಬ್ಬರಿಗೂ ಸಾಧ್ಯವಾಗುವುದಿಲ್ಲ, ಅದು ಸ್ಪಷ್ಟ ನಿರಾಸಕ್ತಿ ಅಂದು ಕಾಣುತ್ತದೆ. ಪ್ರೀತಿ ಹುಟ್ಟುವಾಗ ಗಂಟೆಗಟ್ಟಲೆ ಮಾತನಾಡಿ ಪ್ರೀತಿ ಸಿಕ್ಕ ನಂತರ ಬೇಕಾಬಿಟ್ಟಿಯಾಗಿ ಮಾತಾನೋಡಿದ್ರೆ, ಅವನ/ಅವಳ ಆಸಕ್ತಿ ನಿಧಾನವಾಗಿ ಕುಗ್ಗುತ್ತಿದೆ..

ಲವ್ ಲೈಫ್ನಲ್ಲಿ ಇಬ್ಬರಿಗೂ ಅವರದ್ದೇ ಆದ ಕನಸುಗಳು- ಗುರಿಗಳು ಹೊಂದಿರುತ್ತಾರೆ, ಅವರ ಕನಸುಗಳಿಗೆ, ಗುರಿಗಳಿಗೆ ಬೆಂಬಲಿಸುವುದು ಅಗತ್ಯ.. ಆದರೆ ಗೆಳೆಯ/ಗೆಳತಿ ಇಬ್ಬರೂ ಅವರವರ ಆಕಾಂಕ್ಷೆಗಳನ್ನು ಗಮನಿಸದೆ, ಭವಿಷ್ಯದ ಬಗ್ಗೆ ಯಾವುದೇ ಚರ್ಚೆ ನಡೆಸದೆ ಇದ್ದರೆ, ಅದು ಸ್ಪಷ್ಟವಾಗಿ ನಿರಾಸಕ್ತಿಎಂದು ತಿಳಿಯುತ್ತದೆ, ದೂರವಾಗುವ ಸಂದರ್ಭ ಉಂಟಾಗಬಹುದು.

ಯಾವುದೇ ಪ್ರೇಮಿ ತನ್ನ ಗೆಳಯ/ಗೆಳತಿಯ ಜೊತೆ ಲೈಫ್ ಟೈಮ್ ಪ್ಲಾನಿಂಗ್ಗಳನ್ನು ಹಂಚಿಕೊಂಡು ಬಂದಿರುತ್ತಾರೆ. ಮ್ಯಾರೇಜ್, ಜಾಬ್, ಫ್ಯಾಮಿಲಿ ಬಗ್ಗೆ ಯಾವಾಗಲೂ ಮಾತಾನಾಡುವುದು ಕಾಮನ್. ಆದರೆ ಗೆಳೆಯ/ಗೆಳತಿ ಇಬ್ಬರು ತಮ್ಮ ಫ್ಯೂಚರ್ ಬಗ್ಗೆ ಮಾತನಾಡೋ ನಿಲ್ಲಿಸಿದ್ರೆ, ಅವನು/ಅವಳು ನಿಮ್ಮಿಂದ ದೂರವಾಗಲು ಬಯಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.


