ನಟಿ ಸಾಯಿ ಪಲ್ಲವಿ ತುಂಡು ಬಟ್ಟೆ ಹಾಕೊಂಡಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.. ಸಿನಿಮಾ ಆಗ್ಲಿ, ಯಾವುದೇ ಇವೆಂಟ್ ಆಗ್ಲಿ ಇಲ್ಲಿತನಕ ಸಾಯಿ ಪಲ್ಲವಿ ಗ್ಲಾಮರಸ್ ಡ್ರೆಸ್ ಅಲ್ಲ ಮಾಡರ್ನ್ ಡ್ರೆಸ್ನಲ್ಲೂ ಕಾಣಿಸಿಕೊಂಡಿಲ್ಲ.. ಒಂದು ಲಂಗ ಧಾವಣಿ ಬಿಟ್ರೆ ಸೀರೆಯಲ್ಲೆ ಅತಿ ಹೆಚ್ಚು ಬಾರಿ ಕಾಣಿಸಿಕೊಳ್ತಿದ್ರು.. ಆದ್ರೆ ತಂಗಿ ಪೂಜಾ ಕಣ್ಣನ್ ಜೊತೆ ವೊಕೆಷನ್ ಮೂಡ್ನಲ್ಲಿರೋ ಸಾಯಿ ಪಲ್ಲವಿ ಬಿಕಿನಿಯಲ್ಲಿ ಮಿಂಚ್ತಿರೋದು ಟೀಕೆಗೆ ಗುರಿಯಾಗಿದೆ.
ಇನ್ಫ್ಯಾಕ್ಟ್ ಸಾಯಿ ಪಲ್ಲವಿಯನ್ನ ಸಿಂಪಲ್ ಸ್ಟಾರ್, ಸಿಂಪಲ್ ಬ್ಯೂಟಿ ಎಂದೇ ಕರೆಯುತ್ತಾರೆ. ಅವರ ಅಭಿನಯ ಹಾಗೂ ಅಂದ ಕೂಡ ಸಿಂಪಲ್ ಆಗಿರುತ್ತೆ ಎನ್ನುತ್ತಾರೆ ಅವರ ಅಭಿಮಾನಿಗಳು. ಮೇಕಪ್‌ಗೆ ಹೆಚ್ಚು ಆದ್ಯತೆ ಕೊಡದೆ ಇರುವ ಅಂದವೇ ಸಾಕು ಅನ್ನೋದು ಸಾಯಿ ಪಲ್ಲವಿ ಸ್ಟೈಲ್. ಬೇರೆ ನಟಿಯರಂತೆ ಹೆಚ್ಚಾಗಿ ಮಾಡ್ರನ್ ಡ್ರೆಸ್‌ಗಳನ್ನು ಕೂಡ ಹಾಕೋ ಗೋಜಿಗೆ ಸಾಯಿ ಪಲ್ಲವಿ ಹೋಗುತ್ತಿರಲಿಲ್ಲ. ಹೀಗಾಗಿ ಪಕ್ಕಾ ಸಿಂಪಲ್ ಬ್ಯೂಟಿ ಎಂದು ಅವರನ್ನು ಕರೆಯುವುದು ಮಾತ್ರವಲ್ಲದೆ, ಇದೇ ಸಿಂಪಲ್‌ಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ಆದರೆ ಸಾಯಿ ಪಲ್ಲವಿ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿದ್ದು, ಸಿಂಪಲ್ ಬ್ಯೂಟಿ ಹೀಗಾ ಶಾಕ್ ಕೊಡೋದು ಅಂತ ಬೆರಗಾಗಿದ್ದಾರೆ.
ಬಾಲಿವುಡ್ನ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಸಿಂಪಲ್ ಲೈಫ್ಸ್ಟೈಲ್ ಕಾರಣಕ್ಕೆ ಸೀತೆಗೆ ಇವರೇ ಸೂಕ್ತ ಅಂತ ತುಂಬಾ ಜನ ಹೇಳಿದ್ರು.. ಆದ್ರೀಗ ತುಂಡುಡುಗೆಯಲ್ಲಿ ಕಾಣಿಸಿಕೊಂಡಿರೋ ಸಾಯಿ ಪಲ್ಲವಿ ಅವತಾರ ಕಂಡು ನಮಗೆ ಈ ಸೀತೆ ಬೇಡ ಅಂತ ಕಮೆಂಟ್ ಹಾಕ್ತಿದ್ದಾರೆ.


