ನಟ ಶಿವಣ್ಣ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಇದೀಗ ಸಿನಿಮಾಗಳಲ್ಲಿ ಮತ್ತೆ ಬ್ಯೂಸಿಯಾಗದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದ ಶಿವಣ್ಣ,ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದು ಸಂಪೂರ್ಣ ಗುಣಮುಖರಾಗಿದ್ದು, ಇದೀಗ ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ..
ಶಿವಣ್ಣ ಈಗ ಹಲವು ಫಂಕ್ಷನ್ ಗಳಲ್ಲಿಯೂ ಭಾಗಿಯಾಗಿಗುತ್ತಿದ್ದಾರೆ. ಫ್ಯಾನ್ಸ್ ಗಳು ಶಿವಣ್ಣ ಹೋದಲ್ಲಿ ಬಂದಲ್ಲಿ ಮುತ್ತಿಕೊಳ್ಳುವುದು,ಕೈ ಕುಲುಕುವುದು, ಪೋಟೋ ತೆಗೆಸಿಕೊಳ್ಳುವುದು ಮಾಡುತ್ತಾರೆ. ಕೆಲವೊಮ್ಮೆ ಫ್ಯಾನ್ಸ್ ಗಳ ಕಿರಿಕಿರಿ ಹೆಚ್ಚಾದಾಗ ಪ್ರೀತಿಯಿಂದ ಕೂಗಾಡಿರುವುದು ಸಹ ಇದೆ..
ಇತ್ತೀಚಿಗೆ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಇದೇ ರೀತಿಯ ಘಟನೆ ನಡೆದಿದೆ..ಶಿವಣ್ಣ ಕಾರ್ ನಿಂದ ಇಳಿಯುತ್ತಿದಂತೆ ಫ್ಯಾನ್ಸ್ ಗಳು ಪೋಟೋಗಾಗಿ ಮುಗಿಬಿದ್ದಿದ್ದು, ಪ್ರೀತಿಯಿಂದ ಗದರುತ್ತಾ ಕಾರ್ ಇಳಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಭೈರತಿ ರಣಗಲ್ ಬಳಿಕ ಶಿವಣ್ಣ ಹೀರೊ ಆಗಿ ನಟಿಸಿದ ಯಾವುದೇ ಚಿತ್ರಗಳು ತೆರೆಗೆ ಬಂದಿಲ್ಲ.ವೀರಚಂದ್ರಹಾಸ ಹಾಗೂ ಫೈರ್‌ಪ್ಲೈ ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಆ್ಯಕ್ಟ್ ಮಾಡಿದ್ದ ಶಿವಣ್ಣ,ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ನಟಿಸಿರುವ ’45’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ ಉತ್ತರಕಾಂಡ,ಪೆದ್ದಿ, ಜೈಲರ್-2, 666 ಆಪರೇಷನ್ ಡ್ರೀಮ್ ಥಿಯೇಟರ್,ಡ್ಯಾಡ್, A ಫಾರ್ ಆನಂದ್ ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಇವೆಲ್ಲದರ ಶೂಟಿಂಗ್ ನಲ್ಲಿ ಶಿವಣ್ಣ ಬ್ಯುಸಿ ಆಗಿದ್ದಾರೆ.
ಶಿವಣ್ಣಗೆ 60 ವರ್ಷ ದಾಟಿದ್ದರೂ ಕೂಡಾ ಇವತ್ತಿಗೂ ಕೂಡಾ ಬಹುಬೇಡಿಕೆ ನಟನಾಗಿ ಮಿಂಚುತ್ತಿದ್ದಾರೆ. ಈ ವಯಸ್ಸಿನಲ್ಲೂ ಶಿವಣ್ಣ ಎನರ್ಜಿ ಬೀಟ್ ಮಾಡಲು ಯಾರಿಂದಲೂ ಸಹ ಸಾಧ್ಯವಿಲ್ಲ.. ನಟನೆಗೂ ಸೈ.. ಡ್ಯಾನ್ಸ್ ಗೂ ಸೈ ಎಂಬುದನ್ನು ಹಲವು ವೇದಿಕೆಗಳಲ್ಲಿ ತೋರಿಸಿದ್ದಾರೆ. ಈಗಾಗಲೇ ತಮಿಳಿನ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿ ಗೆದ್ದಿದ್ದಾರೆ. ಇದೀಗ ತಾಲಿವುಡ್ ಅಂಗಳಕ್ಕೂ ಶಿವಣ್ಣ ಪಾದಾರ್ಪಣೆ ಮಾಡುತ್ತಿದ್ದಾರೆ.