Friday, September 12, 2025
26.7 C
Bengaluru
Google search engine
LIVE
ಮನೆರಾಜಕೀಯಶ್ರೀರಾಮ‌ನ ಪ್ರಾಣ ಪ್ರತಿಷ್ಠಾಪನೆ ಆಗ್ತಾ ಇರೋದು ನಮ್ಮೇಲ್ಲರ ಸೌಭಾಗ್ಯ : ಸಿಟಿ ರವಿ

ಶ್ರೀರಾಮ‌ನ ಪ್ರಾಣ ಪ್ರತಿಷ್ಠಾಪನೆ ಆಗ್ತಾ ಇರೋದು ನಮ್ಮೇಲ್ಲರ ಸೌಭಾಗ್ಯ : ಸಿಟಿ ರವಿ

ದಾವಣಗೆರೆ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ‌ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗ್ತಾ ಇರೋದು ನಮ್ಮೇಲ್ಲರ ಸೌಭಾಗ್ಯ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ.

500 ವರ್ಷಗಳ ಸಂಘರ್ಷದ ಇತಿಹಾಸ ಹೊಂದಿದ್ದ ಈ ರಾಮ ಮಂದಿರಕ್ಕಾಗಿ ಲಕ್ಷಾಂತರ ಜನರು ಪ್ರಾಣ ನೀಡಿದ್ದಾರೆ. ಕೋಟ್ಯಾಂತರ ಜನ ಲೋಕಾರ್ಪಣೆಗೆ ಕಾಯುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಉದ್ಘಾಟನೆ ಆಗುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

 

ಕಾಂಗ್ರೆಸ್ ಇದರಿಂದಲೇ ಭಾರತದ ವಿಭಜನೆಗೆ ಕಾರಣವಾಯಿತು. ಕಾಂಗ್ರೆಸ್ ಈ ಗೊಂದಲದಿಂದ ಹೊರ ಬರಬೇಕಾಗಿದೆ. ದೇಶ ಅಖಂಡ ಭಾರತವಾಗಲಿಕ್ಕೆ ನಾವು ಏನ್ ಬೇಕಾದ್ರು ಮಾಡಲು ಸಿದ್ದ ಇದ್ದೇವೆ ಎಂದರು.

ಭಾರತಕ್ಕೆ ಇಲ್ಲದ ಖಿಲಾಫತ್ ಚಳುವಳಿಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಓಲೈಕೆ ನೀತಿಯಿಂದ ಅಖಂಡ ಭಾರತ ಇಬ್ಬಾಗವಿದ್ದು, ರಾಮ ಬೇಕೋ ಬಾಬರ್ ಬೇಕೋ ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ಇದೆ.  ಅವರಿಗೆ ಬಾಬರ್ ಜೊತೆ ನಿಲ್ಲೋಕೆ ಆಗ್ತಾ ಇಲ್ಲ.. ರಾಮನ ಜೊತೆ ನಿಲ್ಲೋಕೆ ಆಗ್ತಾ ಇಲ್ಲ..ರಾಮ ಇಲ್ಲದ ಭಾರತವನ್ನು ಕಲ್ಪಸಿಲು ಸಾಧ್ಯವಿಲ್ಲ ಎಂದರು.

ರಾಮ ಬೇಕು ಎಂದರೆ ಕಾಂಗ್ರೆಸ್ ಸಣ್ಣತನದ ರಾಜಕಾರಣ ನಿಲ್ಲಿಸಬೇಕು. ಬಾಬರ್ ಬೇಕು ಎಂದರೆ ಇಲ್ಲಿ ನಿಮಗೆ ಜಾಗವಿಲ್ಲ. ಕೋಟ್ಯಾಂತರ ಜನರು ಏನು ಆಗಬೇಕು ಎಂದು ಅಪೇಕ್ಷೆ ಪಟ್ಟಿದ್ದರೋ ಅದನ್ನು ನೋಡಿ ಖುಷಿ ಪಡಬೇಕು. ಭಾರತ ವಿಭಜನೆ ಸರಿ ಅಂತ ಯಾರಾದ್ರು ಅಂತಾರಾ?? ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯ ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಎಂದು ನೇರವಾಗಿ ಹಾಕಿಕೊಂಡಿದ್ವಿ. ಆದರೆ ಕಾಂಗ್ರೆಸ್ ಪಕ್ಷದಿಂದ ಈ ರೀತಿ ಪ್ರಣಾಳಿಕೆ ಹಾಕಿದ್ರಾ? ರಾಮ‌ ಅಲ್ಲೇ ಹುಟ್ಟಿದ್ದಾನೆ ಎಂದು ಸ್ಪಷ್ಟವಾಗಿ ಗೊತ್ತಿದ್ರು ಕೂಡ ಪ್ರಶ್ನೆ ಮಾಡಿದ್ರು. ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್ ಅಪಿಡೆವಿಟ್ ಗಾಗಿ ಕಾಂಗ್ರೆಸ್ ಕೊಟ್ಟಿತ್ತು. ಆದರೆ ರಾಮ ನಮ್ಮ ಅರಾಧ್ಯ ದೈವ, ರಾಮ ಕುರುಹು ದೇಶದ ಉದ್ದಗಲಕ್ಕೂ ಇದೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments