ತಮಿಳು ನಟ ವಿಶಾಲ್, ನಟಿ ಸಾಯಿ ಧನಿಶ್ಕಾ ಕುಟುಂಬದವರ ಸಮ್ಮುಖದಲ್ಲಿ ಇಂದು ನಿಶ್ಚಿತಾರ್ಥ ನೆರವೇರಿದೆ. ಮೇ ತಿಂಗಳಲ್ಲಿ ಈ ಬಗ್ಗೆ ವಿಶಾಲ್ ಅವರು ಬಹಿರಂಗ ಘೋಷಣೆ ಮಾಡಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ವಿಶಾಲ್ ಚೇತರಿಕೆ ಕಂಡಿದ್ದು ಸಾಯಿ ಧನ್ಶಿಕಾ ಜೊತೆ ಹೊಸ ಜೀವನಕ್ಕೆ ಸಜ್ಜಾಗಿದ್ದಾರೆ. ಇವರಿಬ್ಬರು ಮದುವೆಯಾಗುತ್ತಿರುವ ವಿಚಾರ ಈ ಹಿಂದೆಯೇ ವೇದಿಕೆಯೊಂದರಲ್ಲಿ ಇವ್ಬರೂ ಕನ್ಫರ್ಮ್ ಮಾಡಿದ್ದರು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಟನ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಸಾಯಿ ಧನಿಷ್ಕ ಸಹ ತಮಿಳು ಚಿತ್ರರಂಗದ ನಟಿ. ಈ ಹಿಂದೆ ‘ಕಬಾಲಿ’ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ತಮಿಳು ಚಿತ್ರರಂಗದ ಪ್ರಮುಖ ನಟ ಮತ್ತು ದಕ್ಷಿಣ ಭಾರತೀಯ ನಟರ ಸಂಘದ ಪ್ರಧಾನ ಕಾರ್ಯದರ್ಶಿ ವಿಶಾಲ್ ಅವರ ಅಭಿಮಾನಿಗಳು ಅವರು ಯಾವಾಗ ಮದುವೆಯಾಗುತ್ತಾರೆ ಎಂದು ತಿಳಿಯಲು ಕಾತುರದಿಂದ ಕಾಯುತ್ತಿದ್ದರು. ಈಗ ಅವರು ಎಂಗೇಜ್ ಆಗಿರುವುದು ಎಲ್ಲರಿಗೂ ಸಂತಸ ತಂದಿದೆ.