ಸಂಬಂಧಗಳಲ್ಲಿ ಬಿರುಕು ಯಾಕ್ ಆಗುತ್ತೆ ಗೊತ್ತಾ..? ಯಾವ-ಯಾವ ಕಾರಣಕ್ಕಾಗಿ ಸಂಬಂಧದ ಮೇಲೆ ಆಳವಾದ ದುಷ್ಪರಿಣಾಮ ಬೀರುತ್ತವೆ ಎನ್ನುವುದನ್ನ ತಿಳಿಯಬೇಕೆ..? ಈ ಸ್ಟೋರಿ ನೋಡಿ..
ಈಗಿನ ಕಾಲದಲ್ಲಿ, ಸಂಬಂಧಗಳ ಅರ್ಥಗಳು ಬಹಳ ವೇಗವಾಗಿ ಬದಲಾಗ್ತಿವೆ.ದಾಂಪತ್ಯದಲ್ಲಿ ಬಿರುಕು ಮಾತ್ರವಲ್ಲದೆ ಈಗಿನ ಪ್ರೇಮಿಗಳ ಜೀವನದಲ್ಲೂ ಪ್ರೀತಿ ಎಷ್ಟು ಬೇಗ ಆಗುತ್ತೋ ಅಷ್ಟೇ ವೇಗವಾಗಿ ಪ್ರೀತಿ ಕಳೆದು ಹೋಗ್ತಿದೆ.
ಇನ್ನೂ ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ‘ಮೈಕ್ರೋ ಚೀಟಿಂಗ್’ ಪದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆಂದರೇನು ಗೊತ್ತಾ ? ಇದೇನು ಮೈಕ್ರೋ ಫೈನಾಸ್ ತರ ದೊಡ್ಡ ದೊಡ್ಡ ಮೋಸ ಅಲ್ಲ, ಚಿಕ್ಕ ಮೋಸ ಬಟ್ ದೊಡ್ಡ ಪರಿಣಾಮ ನಿಮ್ಮ ಲವ್ ಲೈಫ್ನಲ್ಲಿ ಆಗುತ್ತೆ. ಸಂಬಂಧಗಳನ್ನ ಹಾಳುಮಾಡುವಂತ ಈ ಸಣ್ಣ ಸಣ್ಣ ಮೋಸಗಳಿಂದ ಹುಷಾರಾಗಿರಿ. ಸಂಗಾತಿಯಿಂದ ಕೆಲವು ವಿಷಯಗಳನ್ನು ಮರೆಮಾಡುವುದು,ಅಥವಾ ಸೋಶಿಯಲ್ ಮೀಡಿಯಾದಲ್ಲಿ ಬೇರೆ ವಿಶೇಷ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು, ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಮತ್ತು ಎಕ್ಸ್ ಬಾಯ್ಫ್ರೆಂಡ್ ಅಥವಾ ಗರ್ಲ್ಫ್ರೆಂಡ್ ಜೊತೆಗೆ ಪದೇ ಪದೇ ಸಂಪರ್ಕ ಹೊಂದುವುದು ಇದೆಲ್ಲಾ ಮೈಕ್ರೋ ಚೀಟಿಂಗ್.
ಈ ವಿಷಯಗಳು ಚಿಕ್ಕದಾಗಿಯೇ ಕಾಣಿಸಿಕೊಳ್ಳಬಹುದು ಆದರೆ, ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಅವು ಸಂಬಂಧದ ಮೇಲೆ ಆಳವಾದ ದುಷ್ಪರಿಣಾಮ ಬೀರುತ್ತವೆ. ನಿಮಗೂ ಮೈಕ್ರೋ ಚೀಟಿಂಗ್ ಅನುಭವ ಆಗಿದೆಯಾ..? ಈ 6 ಲಕ್ಷಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
1. ಎಕ್ಸ್ ಬಾಯ್ಫ್ರೆಂಡ್/ ಗರ್ಲ್ಫ್ರೆಂಡ್ ಬಗ್ಗೆ ಕಾಡುವ ಹಳೆಯ ನೆನಪುಗಳು
ನಿಮ್ಮ ಸಂಗಾತಿ ಆಗಾಗ ತನ್ನ ಹಳೆಯ ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದರೆ, ಅವರು ಇನ್ನೂ ‘ಆ’ ಹಳೆಯ ನೆನಪುಗಳಿಂದ ಸಂಪೂರ್ಣವಾಗಿ ಹೊರಬಂದಿಲ್ಲ ಎಂಬುದರ ಸಂಕೇತ.
ಇದರಿಂದಾಗಿ ನಿಮ್ಮ ಈಗಿನ ಸಂಬಂಧಗಳು ಅಂದರೆ ಪ್ರಸುತ್ತ ಸಂಬಂಧಗಳು ದುರ್ಬಲಗೊಳ್ಳಬಹುದು..
2. ನಿಮ್ಮ ಪ್ರೀಯ ಮುಂದೆ ಬೇರೆಯವರನ್ನ ಹೊಗಳ ಬೇಡಿ..
ಎಲ್ಲರೂ ಇತರರ ಒಳ್ಳೆಯ ಗುಣಗಳನ್ನು ಮೆಚ್ಚುತ್ತಾರೆ. ಆದರೆ ನೀವು ನಿಮ್ಮ ಸಂಗಾತಿ ಮುಂದೆ ಯಾರೋ ನಿರ್ದಿಷ್ಟ ವ್ಯಕ್ತಿಯನ್ನು ಹೊಗಳಿದರೆ, ಅದು ಸಾಮಾನ್ಯವಾಗಿ ಇರುವುದಿಲ್ಲ. ಇದು ಆ ವ್ಯಕ್ತಿಗಾಗಿ ಅವನು/ಳು ತನ್ನ ಹೃದಯದಲ್ಲಿ ʼಹೆಚ್ಚುವರಿ ಸ್ಥಳʼವನ್ನು ಸೃಷ್ಟಿಸಿದ್ದಾನೆ/ಳೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ..
3. ಸಣ್ಣ ಸಣ್ಣ ಸುಳ್ಳುಗಳನ್ನು ಸಂಗಾತಿಯ ಹಾರ್ಟ್ ಬ್ರೇಕ್ ಮಾಡುತ್ತವೆ
ಸುಳ್ಳು ಹೇಳುವುದು ಲವರ್ಸ್ಗಳಲ್ಲಿ ನಾವು ಕಾಣಬಹುದಾದಚ ಕಾಮನ್ ಫ್ಯಾಕ್ಟರ್ ಆಗಿದೆ . ನಿಮ್ಮ ಸಮಗಾತಿಯ ಮುಂದೆ ಸಂದೇಶವನ್ನು ನಿರ್ಲಕ್ಷಿಸಿದಂತೆ ನಟಿಸಿ, ನಂತರ ಅದೇ ವ್ಯಕ್ತಿಯೊಂದಿಗೆ ಮಾತನಾಡಿದರೆ, ಇದು ಕೂಡ ಒಂದು ರೀತಿಯ ಅಪ್ರಾಮಾಣಿಕತೆಯಾಗುತ್ತದೆ. ಪದೇ ಪದೇ ಇಂತಹ ಸಣ್ಣ ಸುಳ್ಳುಗಳೇ ನಿಮ್ಮ ಸಂಬಂಧದ ಅಡಿಪಾಯವನ್ನು ಅಲುಗಾಡಿಸಬಹುದು, ಎಚ್ಚರ..
4. ನಿಮ್ಮ ಪ್ರೀತ ಬಳಿ ಕೆಲವು ವಿಷಯಗಳನ್ನು ಮರೆಮಾಡುವುದು..
ನಿಮ್ಮ ಸಂಗಾತಿ ನಿಮ್ಮ ಮುಂದೆ ತನ್ನ ಸ್ನೇಹಿತರ ಅಥವಾ ಕುಟುಂಬದವರ ಸತ್ಯವನ್ನು ಮರೆಮಾಡಿದರೆ, ವಿಷಯ ಗಂಭೀರವಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಇವರು ಅವರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತಿದ್ದಾರೆ ಎಂಬುದರ ಸಂಕೇತವದು.
5. ಸಾಮಾಜಿಕ ಮಾಧ್ಯಮದಲ್ಲಿ ಅತಿಯಾದ ಚಟುವಟಿಕೆ
ಸೋಷಿಯಲ್ ಮಿಡಿಯಾವನ್ನು ಅತಿಯಾಗಿ ಹೆಚ್ಚು ಬಳಸುವುದು ತಪ್ಪಿಲ್ಲ, ಆದರೆ ನಿಮ್ಮ ಸಂಗಾತಿ ನಿರಂತರವಾಗಿ ಒಂದು ನಿರ್ದಿಷ್ಟವಾದಂತಹ ಅಕೌಂಟ್ಗೆ ಕಾಮೆಂಟ್, ಲೈಕ್ ಅಥವಾ DM ಮಾಡುತ್ತಿದ್ದರೆ, ಅದರಲ್ಲೇ ಗಂಟೆಗಟ್ಟಲೆ ಕಳೆಯುತ್ತಿದ್ದರೆ, ಅದು ಮೈಕ್ರೋ ಚೀಟಿಂಗ್ನ ಸಂಕೇತವಾಗಿರಬಹುದು.
6. ಸಿಕ್ರೇಟ್ ಮೆಸೇಜ್ ಮತ್ತು ಚಾಟ್ಗಳು
ನಿಮ್ಮ ಗಲ್ಸ್ ಫ್ರೆಂಡ್/ಬಾಯ್ ಫ್ರೆಂಡ್ ನಿಮ್ಮಿಂದ ಮೊಬೈಲ್ ಅನ್ನು ಮರೆಮಾಡುವುದು, ಮೆಸೇಜ್ಗಳನ್ನು ತಕ್ಷಣ ಡಿಲೀಟ್ ಮಾಡುವುದು, ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸೀಕ್ರೆಟ್ ಚಾಟ್ ಇಟ್ಟುಕೊಳ್ಳುವುದು.. ಇನ್ನು ಮುಂತಾದ ವಿಷಯಗಳನ್ನು ಮುಚ್ಚಿಟ್ಟರೆ, ಅದು ಪ್ರಾಮಾಣಿಕತೆಯ ಮೇಲೆ ಸಂಶಯವನ್ನು ಮೂಡಿಸುತ್ತದೆ..!