Friday, August 29, 2025
26.9 C
Bengaluru
Google search engine
LIVE
ಮನೆ#Exclusive NewsTop Newsಆಗಸ್ಟ್ 31 ರಂದು ‘ಧರ್ಮಸ್ಥಳ ಸತ್ಯ ಯಾತ್ರೆ’ ಎಂದ ನಿಖಿಲ್​ ಕುಮಾರಸ್ವಾಮಿ

ಆಗಸ್ಟ್ 31 ರಂದು ‘ಧರ್ಮಸ್ಥಳ ಸತ್ಯ ಯಾತ್ರೆ’ ಎಂದ ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜ್ಯಾತ್ಯಾತೀತ ಜನತಾದಳ ವತಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಳ್ಳಲಾಗಿದೆ ಎಂದು ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್​ ಪಕ್ಷದ ಕಚೇರಿ ಜೆಪಿ ನಗರದಲ್ಲಿ ಮಾತನಾಡಿದ ಅವರು ಆಗಸ್ಟ್ 31 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಧರ್ಮಸ್ಥಳಕ್ಕೆ ಅಪಮಾನ ಆಗುವ ತರ ಕೆಲವೊಂದು ಹೆಜ್ಜೆಯನ್ನು ಸರ್ಕಾರ ಇಟ್ಟಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಯಾತ್ರೆ ಮಾಡಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದ್ರು.

ಧರ್ಮಸ್ಥಳ ಕೇಸ್​ನಲ್ಲಿ ಸರ್ಕಾರ ಯಾವ ರೀತಿ ತನಿಖೆ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ..? ಈ ಎಪಿಸೋಡ್​ ಹಿಂದೆ ಇರುವ ನಿರ್ಮಾಪಕರು ಯಾರು ಅಂತಾ ಪತ್ತೆ ಮಾಡಬೇಕು. ಇದನ್ನು ಪತ್ತೆ ಮಾಡಬೇಕಾದರೆ ಎನ್​ಐಎ ತನಿಖೆ ಮಾಡಬೇಕು. ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಲಕ್ಷಾಂತರ ಭಕ್ತರು ಇದ್ದಾರೆ. ನಾನು ಕೂಡ ಧರ್ಮಸ್ಥಳ ಭಕ್ತನಾಗಿದ್ದೇನೆ.

ಧರ್ಮಸ್ಥಳ ಯಾತ್ರೆಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪಕ್ಷಾತೀತವಾಗಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳೆದ ಒಂದೂವರೆ ತಿಂಗಳಿನಿಂದ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದರೆ ಅವರ ಕುಟುಂಬದ ತಾಳ್ಮೆ ಮತ್ತು ಸಹನೆಯಿಂದ ನಡೆದುಕೊಂಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಹಾಗೂ ಅವಮಾನಗಳಿಗೆ ರಾಜ್ಯ ಸರ್ಕಾರ ಎಡೆ ಮಾಡಿಕೊಟ್ಟಿದೆ. ತರಾತುರಿಯಲ್ಲಿ ಎಸ್​ಐಟಿ ರಚನೆ ಮಾಡಿದೆ. ಒಬ್ಬಿಬ್ಬರ ಹೇಳಿಕೆಯನ್ನು ಪರಿಗಣಿಸಿ ಎಸ್​ಐಟಿಯನ್ನ ಯಾಕೆ ರಚನೆ ಮಾಡಿದ್ರು..? ಎಂದು ನಿಖಿಲ್​ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಯಾರೋ ಒಬ್ಬ ಮಾಸ್ಕ್​  ಮ್ಯಾನ್​  ಬುರುಡೆ ತಂದು ತೋರಿಸಿದ್ರೆ ನಂಬಿ ತನಿಖೆ ಮಾಡಿದ್ದಾರೆ. 17 ಕಡೆ ಅಗೆದಿದ್ದಾರೆ. ಆ ನಂತರ ಮಾಸ್ಕ್​ ಮ್ಯಾನ್​ ಉಲ್ಟಾ ಹೊಡೆದಿದ್ದಾನೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್​ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು ಒಬ್ಬ ಮಹಿಳೆ ಬೂಕರ್​ ಪ್ರಶಸ್ತಿಯನ್ನು ಪಡೆದುಕೊಂಡಿರುವುದಕ್ಕೆ ಸ್ವಾಗತಿಸುತ್ತೇನೆ. ಅವರು ಉದ್ಘಾಟನೆಗೆ ನಾವೆಲ್ಲಾ ಗೌರವ ಕೊಡುತ್ತೇವೆ. ಆದರೆ ಅದೇ ಗೌರವ ಕನ್ನಡಾಂಬೆ, ಅರಿಶಿಣ ಕುಂಕುಮದ ಮೇಲೆ ನಮ್ಮ ಭುವನೇಶ್ವರಿ ದೇವಿ ಅವರು ಒಂದು ರಿಸರ್ವೇಶನ್​ ಇಟ್ಟುಕೊಂಡಿದ್ದಾರಲ್ಲ ಅದಕ್ಕೆ ನಮಗೆ ಆಕ್ಷೇಪ ಇದೆ ಎಂದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments