ಕಂದಾಯ ಸಚಿವ ಕೃಷ್ಣಬೈರೇಗೌಡ ತಹಶೀಲ್ದಾರ್‌ಗಳ ಜೊತೆ ಸಭೆ ನಡೆಸಿದ್ದು, ಸಭೆ ಆರಂಭವಾಗುತ್ತಿದ್ದಂತೆ ತಹಶೀಲ್ದಾರ್‌ಗಳ ಮೇಲೆ ಗರಂ ಆಗಿದ್ದಾರೆ.. ವಿಕಾಸಸೌಧದಲ್ಲಿ ತಹಶೀಲ್ದಾರ್‌ಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಕೆಲಸ ಮಾಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ..
ಕೆಲಸ ಮಾಡದ ಆಯ್ದ ತಹಶೀಲ್ದಾರ್ ಗಳ ಜತೆ ನಡೆಸಿದ ಸಭೆಯಲ್ಲಿ ಹುಬ್ಬಳಿ ತಹಶೀಲ್ದಾರ್ ಮಹೇಶ್‌ಗೆ ಸಚಿವರು ತರಾಟೆ ತೆಗೆದುಕೊಂಡಿದ್ದಾರೆ. ಪ್ರತಿ ಬಾರಿ ಎಷ್ಟು ಕೇಸ್ ಬಾಕಿ ಇದೆ ಎಂದು ಚೆಕ್ ಮಾಡಲು ನಾನೇನು ಗುಮಾಸ್ತಾನಾ..? ಕೋರ್ಟ್ ಕೇಸ್ ವಿಲೇವಾರಿ ಮಾಡದೆ ಇರುವ ತಹಶೀಲ್ದಾರ್ ವಿರುದ್ದ ಕೆಂಡಾಮಂಡಲರಾಗಿದ್ದಾರೆ.
ತಹಶೀಲ್ದಾರ್ ಆದವರು ಕೋರ್ಟ್ ನಲ್ಲಿ ಯಾವ ಕೇಸ್ 90 ದಿನಕ್ಕಿಂತ ಹೆಚ್ಚು ಉಳಿಸಿಕೊಳ್ಳುವಂತಿಲ್ಲ.ಬೇಜವಾಬ್ದಾರಿ ತಹಶೀಲ್ದಾರ್ ಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ,ಜನರಿಗೆ ತೊಂದರೆ ಆಗುತ್ತೆ ಎಂದು ಸಭೆಯಲ್ಲಿ ತಹಶೀಲ್ದಾರ್ ಗಳ ಕಾರ್ಯವೈಖರಿಗೆ ಸಚಿವ ಕೃಷ್ಣಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು..