Wednesday, April 30, 2025
32 C
Bengaluru
LIVE
ಮನೆರಾಜ್ಯಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು : ಪ್ರಕಾಶ್ ಮಲ್ಪೆ

ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು : ಪ್ರಕಾಶ್ ಮಲ್ಪೆ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜ.೧೨ರಂದು ನಡೆಯಿತು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಪರಿಕಲ್ಪನೆಯೊಂದಿಗೆ ಬಾರಿಯ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.

ಸಂವೇಧನ ಪೌಂಡೇಶನ್ ನ ಸ್ಥಾಪಕ ಅಂಕಣಗಾರ ಪ್ರಕಾಶ್ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಿದರು. ಸ್ವಾಮಿ ವಿವೇಕಾನಂದರ ಮೊದಲ ಶಿಷ್ಯ ಶರತಶ್ಚಂದ್ರ ಗುಪ್ತ. ಒಬ್ಬ ಸ್ಟೇಷನ್ ಮಾಸ್ಟರ್ ಅವರ ನಿರ್ಧಾರ ಗಮನಿಸಿದರೆ ಕೇವಲ ಒಂದು ನೋಟದಲ್ಲಿ ಸೆಳೆಯುವ ಚುಂಬಕ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿತ್ತು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ ಪ್ರಭಾಕರ್. ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀರಾಮ ನಮಗೆ ಜೀವನದ ಯಾವುದೇ ಮೌಲ್ಯಗಳಲ್ಲಿ ನಮಗೆ ಆದರ್ಶ. ಅಂತಹ ಶ್ರೀ ರಾಮ ಜನ್ಮಭೂಮಿಯಲ್ಲಿ ಸ್ವಾಮಿ ವಿವೇಕಾನಂದರು ಹುಟ್ಟಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಜಗತ್ತು ವೀರರಿಗೆ, ಶಕ್ತಿವಂತರಿಗೆ ಮಾತ್ರ ಸಿಗುತ್ತದೆ. ಆದರೆ ತನ್ನ ಚಿಂತನೆಯಿಂದ ಜಗತ್ತನ್ನು ಗೆದ್ದವರು ಸ್ವಾಮಿ ವಿವೇಕಾನಂದರು. ವಿದೇಶಿಯರ ತುಳಿತ, ಒದೆಗೆ, ಅಪಮಾನಕ್ಕೆ ಬಿದ್ದಾಗ ಅಲ್ಲಿಂದ ಮೇಲಕ್ಕೆ ಎದ್ದು ನಿಲ್ಲಬೇಕೆಂದು ಸ್ವಾಮಿ ವಿವೇಕಾನಂದರು ಮಾರ್ಗದರ್ಶನ ಮಾಡಿದರು. ಧರ್ಮಪ್ರಧಾನ ಭಾರತ, ಭಾರತ ಸೋಲದೆ ಇರುವುದಕ್ಕೆ ಇರುವ ಒಂದೇ ಮಣಿ ಧರ್ಮ. ಹಿಂದು ಧರ್ಮ ಬದಿಗೆ ಸರಿಸಿದರೆ ಪ್ರಾಣ ಹೋದಂತೆ. ಭಾರತದ ನೆಲ ನಮಗೆ ದೇವರು. ದೇವರು ಮತ್ತು ಭಾರತ ಒಂದೆ ಎಂದು ವಿವೇಕಾನಂದರು ಮತ್ತೆ ಮತ್ತೆ ನೆನಪು ಮಾಡಿಸಿದರು ಎಂದರು.

ರಾಮನ ಪ್ರತಿಷ್ಠೆ ಧರ್ಮದ ಪ್ರತಿಷ್ಠೆ. ಚರಿತ್ರೆಯಲ್ಲಿ ಯಾವುದೆ ದೇಶದ ಮೆಲೆ ನಾವು ಅಕ್ರಮಣ ಮಾಡಿಲ್ಲ. ಆದರೆ ನಮ್ಮ ಮೇಲೆ ಬಹಳ ಆಕ್ರಮಣ ಆಗಿದೆ. ಎಲ್ಲಾ ದೇಶಗಳು ಆಕ್ರಮಣದಿಂದ ಬದಲಾಯಿತು. ಅದರೆ ಎಲ್ಲಾ ಆಕ್ರಮಣ ಅನ್ಯಾಯದ ವಿರುದ್ದ ಭಾರತ ಎದ್ದು ನಿಂತಿತ್ತು ಎಂದು ಡಾ.ಪ್ರಭಾಕರ ಭಟ್ ಹೇಳಿದರು.

ಇದೆ ಸಂದರ್ಭದಲ್ಲಿ ರಾಮಮಂದಿರದ ಹೋರಾಟದ ಮಜಲುಗಳು ಎಂಬ ವಿಶೇಷ ಪುಸ್ತಕ ‘ಪುನರ್ವಸು’ ಇದರ ಮುಖಪುಟದ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಯಂ ಕೃಷ್ಣ ಭಟ್ ಉಪಸ್ಥಿತರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments