ಟೆಸ್ಟ್ ಕ್ರಿಕೆಟ್ಗೆ ಕಿಂಗ್ ವಿರಾಟ್ ಕೊಹ್ಲಿ ಕಡೆಗೂ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಎಕ್ಸ್ ಸಾಮಾಜಿಕ ಜಾಲತಾಣದ ಖಾತೆ ಮೂಲಕ ವಿರಾಟ್ ಕೊಹ್ಲಿ ಈ ಪ್ರಕಟಣೆ ಮಾಡಿದ್ದಾರೆ. ಈಗಾಗಲೇ ಟಿ-20 ಪಾರ್ಮೆಟ್ ಗೆ ವಿದಾಯ ಹೇಳಿರುವ ಈ ಮೇರು ಕ್ರಿಕೆಟಿಗ ಇನ್ಮುಂದೆ ಭಾರತದ ಪರವಾಗಿ ಕೇವಲ ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
14 ವರ್ಷ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯಗಳಿಗೆ ಪ್ರಾತಿನಿಧ್ಯ ವಹಿಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ರು. ಟೆಸ್ಟ್ ವೃತ್ತಿಜೀವನದಲ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 9230 ರನ್ ಗಳಿಸಿದ್ದಾರೆ. ಇದ್ರಲ್ಲಿ 30 ಶತಕ, 31 ಅರ್ಧ ಶತಕಗಳು ಇವೆ. 46.85ರ ಸರಾಸರಿಯಲ್ಲಿ ಕೊಹ್ಲಿ ಟೆಸ್ಟ್ ರನ್ ಗಳಿಸಿದ್ದಾರೆ.
2025ರ ಜನವರಿ 3ರಂದು ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ತಮ್ಮ ಕೊನೆ ಟೆಸ್ಟ್ ಪಂದ್ಯ ಆಡಿದ್ದರು



