Thursday, January 29, 2026
26.8 C
Bengaluru
Google search engine
LIVE
ಮನೆರಾಜ್ಯಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಭವಿಷ್ಯ..!

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಭವಿಷ್ಯ..!

ಕೋಡಿಮಠದ ಸ್ವಾಮೀಜಿಗಳ ಭವಿಷ್ಯ ತುಂಬಾನೇ ಫೇಮಸ್.. ಅವರು ನುಡಿದ ಭವಿಷ್ಯಗಳ ಪೈಕಿ ಹಲವು ಸತ್ಯವಾಗಿದೆ. ಇದೀಗ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯವೊಂದನ್ನ ನುಡಿದಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ  ಕೋಡಿಮಠ ಸ್ವಾಮೀಜಿ ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಹಾಲುಮತದವರಿಗೆ ಅಧಿಕಾರ‌ ಬಂದರೆ ಬಿಡಿಸಿಕೊಳ್ಳೋದು ಕಷ್ಟ ಅವರಾಗಿಯೇ ಬಿಡಬೇಕು. ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಹಕ್ಕಬುಕ್ಕರು ಕಟ್ಟಿದ್ದು. ಇವತ್ತು ಮೈಸೂರು ದಸರಾ ಅದೇ ಚಿಹ್ನೆಯಲ್ಲಿ‌ ನಡೆಯುತ್ತಿದೆ ಎಂದಿರೋ ಸ್ವಾಮೀಜಿ, ಹಾಲು ಕೆಟ್ಟರು ಹಾಲು‌ಮತ‌ ಕೆಡುವುದಿಲ್ಲ. ಆಂತವರ‌ ಕೈಲಿ ಅಧಿಕಾರ ಸಿಕ್ಕಿರುವುದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ..

ಇದರ ಅರ್ಥ ಹಾಲುಮತದ, ಅಂದ್ರೆ ಕುರುಬರಾಗಿರುವ ಸಿದ್ದರಾಮಯ್ಯನವರು ಅವರಾಗೇ ಇಳಿದರೆ ಮಾತ್ರ ಬೇರೆಯವರು ಸಿಎಂ ಆಗಬಹುದು, ಇಲ್ಲದಿದ್ದರೆ ಸಿದ್ದರಾಮಯ್ಯ ಅವರನ್ನ ಸಿಎಂ ಕುರ್ಚಿಯಿಂದ ಯಾವುದೇ ಕಾರಣಕ್ಕೂ ಇಳಿಸಲು ಆಗಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments