ಆತ ರಾಜಕುಟುಂಬದಲ್ಲಿ ಹುಟ್ಟಿದ.. ಸಾವಿರಾರು ಕೋಟಿ ಒಡೆಯ.. ಆದ್ರೆ, ವಿಧಿಯಾಟವೇ ಬೇರೆ ಇತ್ತು.. ಅಪಘಾತದಲ್ಲಿ ಗಾಯಗೊಂಡು ಕೋಮಾಗೆ ಹೋದ.. ಇದಾಗಿ 20 ವರ್ಷ ಆಯ್ತು.. ಇನ್ನೂ ಕೋಮಾದಲ್ಲೇ ಇದ್ದಾನೆ.. ಎಚ್ಚರ ಗೊಳ್ತಾನೆ ಎಂದು ಅಪ್ಪ ಅಮ್ಮ ಎದಿರು ನೋಡ್ತಿದ್ದಾರೆ.. ಇದು ಸೌದಿ ಯುವರಾಜ ಅಲ್ ವಹೀದ್ ಬಿನ್ ಖಲೀದ್ ಬಿನ್ ತಲಾಲ್ ವಿಷಾದ ಗಾಥೆ..
ಇತ್ತೀಚಿಗೆ 36ನೇ ವರ್ಷಕ್ಕೆ ಕಾಲಿಟ್ಟ ಅಲ್ ವಹೀದ್ ಬಿನ್ ಖಲೀದ್ ಬಿನ್ ತಲಾಲ್ ಈಗ ಎದ್ದೇಳ್ತಾನೆ.. ಆಗ ಎದ್ದೇಳ್ತಾನೆ ಎಂದು ಅವರ ಅಪ್ಪ ಬಿಲಿಯನಿಯರ್ ಯುವರಾಜ ಖಲೀದ್ ಬಿನ್ ತಲಾಲ್ ಅಲ್ ಸೌದ್ ಕಾಯ್ತಿದ್ದಾರೆ.
ಅದು 2005 ಅಲ್ ವಹೀದ್ ಬ್ರಿಟನ್ನ ಮಿಲಿಟರಿ ಕಾಲೇಜ್ನಲ್ಲಿ ಓದುತ್ತಿದ್ದ.. ಕಾರು ಅಪಘಾತದಲ್ಲಿ ಗಾಯಗೊಂಡ… ಅಂದಿನಿಂದ ಕೋಮಾದಲ್ಲೇ ಇದ್ದಾನೆ. ರಿಯಾದ್ ಕಿಂಗ್ ಅಬ್ದುಲ್ ಅಜಿಜ್ ಮೆಡಿಕಲ್ ಸಿಟಿ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಟ್ಯೂಬ್ ಮೂಲಕ ಆಹಾರ ಕೊಡ್ತಿದ್ದಾರೆ.. 20 ವರ್ಷದಿಂದ ಕೋಮಾದಿಂದ ಇರುವ ಆತನನ್ನು ಸ್ಲೀಪಿಂಗ್ ಪ್ರಿನ್ಸ್ ಅಂತಾನೆ ಎಲ್ರೂ ಕರೀತಾರೆ.
ವೆಂಟಿಲೇಟರ್ ಮೇಲೆ ಟ್ರೀಟ್ಮೆಂಟ್ ಕೊಡ್ತಿದ್ರೂ ಸ್ಲೀಪಿಂಗ್ ಪ್ರಿನ್ಸ್ ಚೇತರಿಸಿಕೊಳ್ಳುವ ಅವಕಾಶವಿಲ್ಲ.. ವೆಂಟಿಲೇಟರ್ ತೊಲಗಿಸಿ ಎಂದು 2015ರಲ್ಲೇ ವೈದ್ಯರು ಶಿಫಾರಸು ಮಾಡಿದ್ರು. ಆದ್ರೆ ತಂದೆ ನಿರಾಕರಿಸಿದ್ರು. ಅದ್ಭುತ ನಡೆಯಬಹುದು ಎಂಬ ಆಸೆಯಲ್ಲಿ ಅವರು ಕಾಯುತ್ತಲೇ ಇದ್ದಾರೆ.
ತನ್ನ ಪುತ್ರ ಅಪಘಾತದಲ್ಲಿ ಸಾಯಬೇಕು ಎಂದು ದೇವರು ಭಾವಿಸಿದ್ರೆ ಆಗಲೇ ಆತ ಸಮಾಧಿ ಸೇರುತ್ತಿದ್ದ.. ಆದ್ರೆ ಹಾಗೇ ಆಗಿಲ್ಲ ಎಂದು ಆ ತಂದೆ ಹೇಳ್ತಾರೆ.
2019ರಲ್ಲಿ ಒಮ್ಮೆ ಸ್ಲೀಪಿಂಗ್ ಪ್ರಿನ್ಸ್ ಚೇತರಿಸಿಕೊಳ್ಳುವ ಸುಳಿವು ಸಿಕ್ಕಿತ್ತಯ. ಕೈ ಬೆರಳು ಅಲುಗಾಡಿಸುವುದು..ತಲೆ ಅಲುಗಾಡಿಸುವುದು ಮಾಡಿದ್ದ.. ಇದು ರಾಜಕುಟುಂಬದಲ್ಲಿ ಹೊಸ ಆಸೆ ಚಿಗುರುವಂತೆ ಮಾಡಿತ್ತು.. ಆದ್ರೆ, ನಂತ್ರ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ಈಗ 36ನೇ ವರ್ಷಕ್ಕೆ ಕಾಲಿದ್ದ ಸ್ಲೀಪಿಂಗ್ ಪ್ರಿನ್ಸ್ ಆರೋಗ್ಯ ಚೇತರಿಕೆ ಕಾಣಲಿ ಎಂದು ರಾಜಕುಟುಂಬದ ಬೆಂಬಲಿಗರು ಪ್ರಾರ್ಥನೆ ಮಾಡ್ತಿದ್ದಾರೆ.
ಅಂದ ಹಾಗೇ, ಸ್ಲೀಪಿಂಗ್ ಪ್ರಿನ್ಸ್ ಅಲ್ ವಹೀದ್ ಸೌದಿ ರಾಜಕುಟುಂಬಕ್ಕೆ ಸೇರಿದ್ದರೂ, ಹಾಲಿ ರಾಜ ಸಲ್ಮಾನ್ ಜೊತೆ್ಗೆ ಯಾವುದೇ ಸಂಬಂಧ ಹೊಂದಿಲ್ಲ. ಅಲ್ ವಹೀದ್ ಅಜ್ಜ ಪ್ರಿನ್ಸ್ ತಲಾಲ್ ಬಿಲ್.. ಅಧುನಿಕ ಸೌದಿ ಅರೇಬಿಯಾದ ಸೃಷ್ಟಿಕರ್ತ ಅಬ್ದುಲ್ ಅಜಿದ್ ಅಲ್ ಸೌದಿಗೆ ಇರುವ ಅನೇಕ ಪುತ್ರರಲ್ಲಿ ಈತನೂ ಒಬ್ಬ..