ಕರ್ನಾಟಕ ಸರ್ಕಾದ ಜಾತಿ ಜನಗಣತಿ ಸಮರ್ಪಕವಾಗಿಲ್ಲ ಎಂದು ಪರಮ ಪೂಜ್ಯ ಜಗದ್ಗುರು ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿಕೆ ನೀಡಿದ್ದಾರೆ.
ಸರ್ಕಾರದ ವರದಿ ಸಾರ್ವಜನಿಕರಲ್ಲಿ ಸಾಕಷ್ಟು ಸಂದೇಹಗಳನ್ನು ಹುಟ್ಟು ಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಸಿದ್ದ ಪಡಿಸಲಾಗಿದೆ. ವರದಿ ಸಿದ್ದ ಪಡಿಸಿದ ವ್ಯಕ್ತಿಗಳು ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗಳನ್ನ ಸಂಪರ್ಕಿಸಿಲ್ಲ ಎಂದ ಆರೋಪ ಕೇಳಿ ಬಂದಿದೆ.ಕರ್ನಟಕದಲ್ಲಿ ಬಹುತೇಕ ಲಿಂಗಾಯತರು ಬಹುಸಂಖ್ಯಾತರು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿ…2ನೇ ಸ್ಥಾನಲ್ಲಿ ಒಕ್ಕಲಿಗ ಸಮುದಾಯವಿದೆ..ನಂತರ ಇನ್ನು ಅನೇಕ ಜಾತಿಗಳು ಸ್ಥಾನಗಳನ್ನ ಪಡೆದುಕೊಂಡಿವೆ..ಇತ್ತೀಚಿನ ವರದಿಯನ್ನು ಮುಖ್ಯಾಂಶಗಳನ್ನು ಗಮನಿಸಿದಾಗ ಲಿಂಗಾಯತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವದನ್ನು ಕಂಡು ಬರುತ್ತದೆ…
ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವ ಕಾರಣ ಇರಬಹುದು. ದೋಷಪೂರಿತ ವರದಿಯನ್ನ ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ ಅನ್ಯಾಯವಾಗಬಹುದು. ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರೋದು ಅತ್ಯಂತ ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


