ಬೆಂಗಳೂರು: ಹನಿಟ್ರ್ಯಾಪ್ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಸಚಿವ ಕೆ.ಎನ್.ರಾಜಣ್ಣ ಈ ಬಗ್ಗೆ ಗೃಹಸಚಿವ ಪರಮೇಶ್ವರ್ ಅವರಿಗೆ ದೂರು ನೀಡಿದ್ದಾರೆ.
ಇನ್ನು ಸಚಿವ ರಾಜಣ್ಣ ತಮ್ಮನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂದು ಅಧಿವೇಶನದಲ್ಲಿ ಹೇಳಿದ್ದರು.
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು. 2ಬಾರಿ ಬಂದಾಗ ಹುಡುಗಿ ಬೇರೆ ಬೇರೆ ಇದ್ದರು, .ಹೈಕೋರ್ಟ್ ಲಾಯರ್ ಅಂತಾ ಹೇಳಿಕೊಂಡು ಬಂದಿದ್ದರು. ಬಂದಿದ್ದವರು ಅಪರಿಚಿತರು ಎಂದು ಕೆಎನ್ ರಾಜಣ್ಣ ಇತ್ತಿಚಿಗೆ ಹೇಳಿಕೆ ನೀಡಿದ್ದರು.
ವಿಧಾನಸಭೆಯಲ್ಲಿ ಹೇಳಿದ ಮಾತಿನಂತೆ ಸಚಿವ ಕೆ.ಎನ್ ರಾಜಣ್ಣ ಅವರು ಇಂದು ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ತೆರಳಿ ತಮ್ಮ ದೂರು ದಾಖಲಿಸಿದ್ದಾರೆ. ಕೆಲ ದಾಖಲೆಗಳೊಂದಿಗೆ ಸಚಿವ ರಾಜಣ್ಣ ಅವರು ದೂರು ಸಲ್ಲಿಸಿರೋದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.