ಬೆಂಗಳೂರು: ರಾಜ್ಯದ ಜನಕ್ಕೆ ಬಸ್, ಮೆಟ್ರೋ ದರ ಏರಿಕೆಯ ಬಳಿಕ ಮತ್ತೊಂದು ಬಿಗ್ ಶಾಕ್ ಕಾದಿದೆ. ಹಾಲಿನ ದರ ಏರಿಕೆ ಸಂಬಂಧ ಇಂದು ಸಿಎಂ ಸಿದ್ದಾರಾಮಯ್ಯ ಅವರ ಜೊತೆ ಕೆಎಮ್ಎಫ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಹಾಲಿನ ದರ ಏರಿಕೆ ಇಂದೇ ಸಿಎಂ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಕೆಎಂಎಫ್ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಹಾಲಿನ ದರ ಏರಿಕೆ ಫಿಕ್ಸ್ ಎಂದು ಹೇಳಿತ್ತು. ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯ ಸರ್ಕಾರ ಕೂಡ ತಯಾರಿ ನಡೆಸುತ್ತಾ ಇದ್ದು, ಶೀಘ್ರವೇ ಪ್ರತಿ ಲೀಟರ್ ಹಾಲಿನ ದರ ಬಹುತೇಕ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಕೆಲ ದಿನಗಳ ಹಿಂದೆ ರಾಜ್ಯದ ರೈತರು ಕೆಎಂಎಫ್ ಮುಂದೆ ಹಾಲಿನ ದರ ಏರಿಸುವಂತೆ ಪ್ರತಿಭಟನೆ ನಡೆಸಿದ್ದರು. ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್‌ಗೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿದೆ.


