Wednesday, January 28, 2026
18.8 C
Bengaluru
Google search engine
LIVE
ಮನೆರಾಜ್ಯಬೊಂಬೆ ತಯಾರಿಕೆಯಲ್ಲಿ ಚೈನಾಗೆ ಪೈಪೋಟಿ ನೀಡುವ ಅವಶ್ಯಕತೆ ಇದೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಬೊಂಬೆ ತಯಾರಿಕೆಯಲ್ಲಿ ಚೈನಾಗೆ ಪೈಪೋಟಿ ನೀಡುವ ಅವಶ್ಯಕತೆ ಇದೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ಕೊಪ್ಪಳ: ಜಗತ್ತಿನಾದ್ಯಂತ ಗೊಂಬೆ ತಯಾರಿಕೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದರ ಲಾಭವನ್ನು ಹೆಚ್ಚಾಗಿ ಚೈನಾ ಪಡೆಯುತ್ತಿದೆ, ಅದಕ್ಕೆ ಪೈಪೋಟಿ ನೀಡುವ ಉದ್ದೇಶದಿಂದ ಕೊಪ್ಪಳ ಸೇರಿದಂತೆ ಹಲವು ಭಾಗಗಳಲ್ಲಿ ಒತ್ತು ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು

ನಗರದಲ್ಲಿ ಮಾತನಾಡಿದ ಅವರು, ಗೊಂಬೆ ತಯಾರಿಕೆಯಲ್ಲಿ ಚೈನಾ ಮೊದಲಿದೆ. ಅದಕ್ಕೆ ಪೈಪೋಟಿ ಕೊಡುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ರಾಜ್ಯದಲ್ಲಿ ಗೊಂಬೆ ತಯಾರಿಕಾ ಕಾರ್ಖಾನೆಗಳನ್ನೂ ನಿರ್ಮಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಸೂಕ್ತ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದರು.

ಇನ್ನು ಕೇಂದ್ರ ಸಚಿವರಿಗೆ ಸ್ಥಳಿಯರು ಬಲ್ಡೋಟಾ ಕಂಪನಿ ಸ್ಥಾಪಿಸದಂತೆ ಮನವಿ ಮಾಡಿದರು. ಸ್ಥಳಿಯರ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಬಲ್ಟೋಟಾ ಕಂಪನಿ ಸ್ಥಾಪಿಸಬಾರದೆಂದು ಗವಿಶ್ರೀಗಳ ನೇತೃತ್ವದಲ್ಲಿ ಕೊಪ್ಪಳ ಬಂದ್ ಮಾಡಲಾಗಿತ್ತು. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಬಲ್ಡೋಟ ಕಂಪನಿ ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೇಂದ್ರದ ಮುಂದೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments