Tuesday, January 27, 2026
20.2 C
Bengaluru
Google search engine
LIVE
ಮನೆ#Exclusive NewsTop Newsತನ್ನದೇ ಅಶ್ಲೀಲ ವಿಡಿಯೋಗಳನ್ನು ಕೋರ್ಟ್‌ನಲ್ಲಿ ವೀಕ್ಷಿಸಿದ ಪ್ರಜ್ವಲ್‌ ರೇವಣ್ಣ

ತನ್ನದೇ ಅಶ್ಲೀಲ ವಿಡಿಯೋಗಳನ್ನು ಕೋರ್ಟ್‌ನಲ್ಲಿ ವೀಕ್ಷಿಸಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಿದ ಕೋರ್ಟ್‌ನಲ್ಲಿ ಇಂದು ಹಾಸನದ ಮಾಜಿ ಸಂಸದ  ಪ್ರಜ್ವಲ್‌ ರೇವಣ್ಣ, ವಕೀಲರು ಮತ್ತು ತಾಂತ್ರಿಕ ತಜ್ಞರ ತಂಡ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ಅವರನ್ನು ಪೊಲೀಸರು ಕರೆ ತಂದ ಬಳಿಕ ವಿಚಾರಣೆ ಆರಂಭವಾಯಿತು. ಈ ವೇಳೆ ಮಾಧ್ಯಮದವರಿಗೆ ಸುದ್ದಿಗಳನ್ನು ಪ್ರಕಟ ಮಾಡದಂತೆ ನಿರ್ದೇಶಿಸಬೇಕೆಂದು ಪ್ರಜ್ವಲ್‌ ಪರ ವಕೀಲ ಅರುಣ್ ಮನವಿ ಮಾಡಿದರು.

ಇದಕ್ಕೆ ನ್ಯಾಯಧೀಶರು ಮಾಧ್ಯಮವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ಎಸ್‌ಪಿಪಿ ಮೀಡಿಯಾದವರು ಇಂಜಕ್ಷನ್‌ ತಂದಿರುವ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

ನಂತರ ತಾಂತ್ರಿಕ ತಜ್ಞರು ಬಂದಿಲ್ಲ. ಹೀಗಾಗಿ ವಿಡಿಯೋ ವೀಕ್ಷಣೆಗೆ ಮತ್ತೊಂದು ದಿನಾಂಕ ನೀಡಬೇಕೆಂದು ಪ್ರಜ್ವಲ್‌ ಪರ‌ ವಕೀಲ ಅರುಣ್ ಮನವಿ ಮಾಡಿದರು. ಇದಕ್ಕೆ ಗರಂ ಆದ ಜಡ್ಜ್‌, ಸಮಯ ವಿಸ್ತರಣೆ ಮಾಡಲು ಏನು ಮಾಡಬೇಕು ಅದನ್ನು ಮಾಡುತ್ತಾ ಇದ್ದೀರಿ. ಬೇಕಾದರೆ ಮಹಿಳಾ ನ್ಯಾಯಾಧೀಶರು ಬೇಕು ಎಂದು ಅರ್ಜಿ ಹಾಕಿ ನನ್ನದೇನು ಅಭ್ಯಂತರವಿಲ್ಲ ಎಂದರು.

ತನ್ನ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,000 ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಹಾಗೂ ಪ್ರಕರಣದಿಂದ ತನ್ನನ್ನು ಖುಲಾಸೆ ಮಾಡುವಂತೆ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್‌ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು. ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ ಎಂದು ಕೋರ್ಟ್‌ ಸೂಚಿಸಿತ್ತು. ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಈ ಅರ್ಜಿಯನ್ನು ಇತ್ಯರ್ಥ ಮಾಡಿತ್ತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments