ದಾವಣಗೆರೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಾಕಷ್ಟು ಕಷ್ಟಪಟ್ಟಿದ್ದು, ಅದಕ್ಕೆ ಪ್ರತಿಫಲ ಇದ್ದೇ ಇದೆ. ಇದೇ ಅವಧಿಯಲ್ಲಿ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಳಗದ ಚನ್ನಗಿರಿ ಕ್ಷೇತ್ರ ಶಾಸಕ ಶಿವಗಂಗಾ ವಿ.ಬಸವರಾಜ ಮತ್ತೆ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ಶೃಂಗೇರಿಯಲ್ಲಿ ಶನಿವಾರ, ಕಾರ್ಯಕರ್ತರು ಹಾಗೂ ಶಾಸಕರ ಬಗ್ಗೆ ಡಿಕೆಶಿ ಒಳ್ಳೇಯ ಅರ್ಥದಲ್ಲೇ ಮಾತನಾಡಿದ್ದಾರೆ. ಅದು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತೆ. ಕೆಟ್ಡದಾಗಿ ನೋಡಿದರೆ ಕೆಟ್ಡದಾಗಿ ಕಾಣುತ್ತೆ, ತಪ್ಪಾಗಿ ಅರ್ಥೈಸಿದರೆ ತಪ್ಪಾಗಿ ಕೇಳಿಸುತ್ತೆ. ಹೋರಾಟ ಮಾಡಿ ಕಷ್ಟಪಟ್ಟು ಎಲ್ಲಾ ಶಾಸಕರನ್ನು ಗೆಲ್ಲಿಸಿದ್ದಾರೆ. ಡಿಕೆಶಿಯವರು ಶಾಸಕರನ್ನು ಅರ್ಡರ್ ಮಾಡಿ ಕೇಳಬೇಕು. ಅವರು ಹೇಳಿರುವುದು ಸರಿ ಇದೆ ಎಂದು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಕೆಪಿಸಿಸಿ ಅಧ್ಯಕ್ಷರಾದ ಅವರು ವಾಸ್ತವವಾಗಿ 5 ವರ್ಷ ಮುಖ್ಯಮಂತ್ರಿ ಆಗಬೇಕಿತ್ತು.


