ನಟ ಯಶ್ ಅವರ ಅಭಿಮಾನಿಗಳ ಪಾಲಿಗೆ ಇಂದು (ಜನವರಿ 8) ಹಬ್ಬ. ಏಕೆಂದರೆ ಇಂದು ಅವರ ನೆಚ್ಚಿನ ನಟನ ಬರ್ತ್ಡೇ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹಾರತುರಾಯಿಗಳ ಸಹವಾಸಕ್ಕೆ ಹೋಗದೆ ಫ್ಯಾನ್ಸ್ ಸಾಮಾಜಿಕ ಕೆಲಸಗಳ ಮೂಲಕ ಬರ್ತ್ಡೇ ಆಚರಿಸುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಬರ್ತ್ಡೇನ ಆಪ್ತರ ಜೊತೆ ಆಚರಿಸಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗೋವಾದಲ್ಲಿ ರಾಕಿ ಜನ್ಮ ದಿನ
ಗೋವಾದಲ್ಲಿಯೇ ರಾಕಿ ಭಾಯ್ ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಸಮುದ್ರತೀರದಲ್ಲಿಯೇ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಕೂಡ ಈ ಒಂದು ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.
ಯಶ್ ಜನ್ಮ ದಿನದಂದ ಊರಲ್ಲಿ ಇರೋದಿಲ್ಲ ಅಂತಲೇ ಹೇಳಿದ್ದರು. ಆ ಪ್ರಕಾರ ಬೆಂಗಳೂರಿನಿಂದ ಯಶ್ ಗೋವಾಕ್ಕೆ ಬಂದಿದ್ದಾರೆ. ಈ ಮೂಲಕ ತಮ್ಮ ಫ್ಯಾಮಿಲಿ ಜೊತೆಗೆ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.