Wednesday, November 19, 2025
21.2 C
Bengaluru
Google search engine
LIVE
ಮನೆ#Exclusive Newsಟ್ರಕ್ ಗೆ ಡಿಕ್ಕಿಯಾದ ಬಸ್ ...ಪ್ರಾಣ ಬಿಟ್ಟ 38 ಪ್ರಯಾಣಿಕರು

ಟ್ರಕ್ ಗೆ ಡಿಕ್ಕಿಯಾದ ಬಸ್ …ಪ್ರಾಣ ಬಿಟ್ಟ 38 ಪ್ರಯಾಣಿಕರು

ಟೈರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದ ಬಸ್, ಟ್ರಕ್​ವೊಂದಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 38 ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯು ಆಗ್ನೇಯ ಬ್ರೆಜಿಲ್‌ನಲ್ಲಿ ನಡೆದಿದೆ.

ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಳಗಿನ ಜಾವ 4:00ರ ಸುಮಾರಿಗೆ ಸಾವೊ ಪಾಲೊ ಪ್ರದೇಶದಿಂದ ವಿಟೋರಿಯಾ ಡ ಕಾನ್‌ಕ್ವಿಸ್ಟಾಗೆ ತೆರಳುತ್ತಿತ್ತು. ವೇಗವಾಗಿ ತೆರಳುತ್ತಿರುವಾಗ ಬಸ್​ನ ಟೈರ್ ಸ್ಫೋಟಗೊಂಡಿದೆ. ಇದರ ಪರಿಣಾಮ ಅದೇ ವೇಗದಲ್ಲಿದ್ದ ಬಸ್​ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್​ಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ತಕ್ಷಣ ಹಿಂದೆಯಿಂದ ಇನ್ನೊಂದು ವಾಹನ ಬಂದು ಬಸ್​ಗೆ ಗುದ್ದಿದೆ. ಇದರಿಂದ ಸ್ಥಳದಲ್ಲೇ 38 ಪ್ರಯಾಣಿಕರು ಹಸುನೀಗಿದ್ದಾರೆ. ಅಲ್ಲದೇ 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದೆ ಎಂದು ತಿಳಿಸಲಾಗಿದೆ.

ಬಸ್​, ಟ್ರಕ್​​ಗೆ ಡಿಕ್ಕಿಯಾಗುತ್ತಿದ್ದಂತೆ ಕಾರೊಂದು ವೇಗವಾಗಿ ಬಂದು ಭೀಕರವಾಗಿ ಗುದ್ದಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಮೂರು ವಾಹನಗಳು ಬೆಂಕಿಯಿಂದ ಧಗಧಗಿಸಿವೆ. ವಾಹನಗಳು ಯಾವುದೇ ಕೆಲಸಕ್ಕೆ ಬಾರದ ರೀತಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎನ್ನಲಾಗಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬಂದು ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಬಸ್​ ಅಪಘಾತದ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಪ್ರತಿಕ್ರಿಸಿದ್ದು ಇದೊಂದು ಭಯಾನಕ ದುರಂತ ಎಂದು ಹೇಳಿದ್ದಾರೆ. ಜೀವ ಕಳೆದುಕೊಂಡ ಎಲ್ಲರಿಗೂ ಸಂತಾಪ ಸೂಚನೆ ಮಾಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments