ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಭಾರತ ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿಯೂ ಸೂಪರ್ ಸ್ಟಾರ್ ಎಂದೆ ಖ್ಯಾತಿ ಪಡೆದಿರೋ ರಜನೀಕಾಂತ್ ರವರಿಗೆ ಭಾರತ ರತ್ನ ಕೊಡಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ.
ಕೇವಲ ಸಿನಿಮಾ ಅಷ್ಟೆ ಅಲ್ದೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡು ಸಾಕಷ್ಟು ಜನರಿಗೆ ಆಸರೆಯಾಗಿದ್ದಾರೆ.ಇದುವರೆಗೂ 171 ಸಿನಿಮಾಗಳನ್ನ ಪೂರೈಸಿರೋ ರಜನಿಕಾಂತ್, ಎಲ್ಲರಿಗೂ ಮೆಚ್ಚುಗೆ.ಪ್ರಮುಖವಾಗಿ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಹೀಗೆ ಸಿನಿ ಪರಿಶ್ರಮ ಸಾಧನೆಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಕೂಡಾ ಪಡೆದಿದ್ದಾರೆ.ಸಿನಿಮಾಗಾಗಿಯೇ ಜೀವನ ಮುಡುಪಾಗಿಟ್ಟು ಸುದೀರ್ಘ ಐವತ್ತು ವರ್ಷಗಳಿಂದ ಸೇವೆ ಸಲ್ಲಿಸ್ತಿದ್ದಾರೆ.ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್,ಸ್ನೇಹಿತ ರಾಜಬಹುದ್ದೂರ್ ಸಹಕಾರದಿಂದ ತಮಿಳಿನ ಅಪೂರ್ವ ರಾಗಂಗಳ್ ಎಂಬ ಸಿನಿಮಾದಲ್ಲಿ ನಟಿಸಿ ಸೈ ಎಂದೆನಿಸಿಕೊಂಡಿದ್ರು.ಆ ಬಳಿಕ ಅವರ ಒಂದೊಂದು ಸಿನಿಮಾಗಳು ಚರಿತ್ರೆಯನ್ನೇ ಸೃಷ್ಠಿಸಿದ್ವು.ಹೀಗಾಗಿ ರಜನಿಕಾಂತ್ ರವರಿಗೆ 75 ವರ್ಷವಾಗಿದ್ದು,ಸಿನಿಮಾ ರಂಗದ ಮೇರು ಪರ್ವತವಾಗಿದ್ದಾರೆ.ಕೇವಲ ತಮಿಳು ಭಾಷೆ ಅಲ್ಲದೆ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಹೀಗೆ ಅವರ ಸಿನಿ ಕೊಡುಗೆ ಹಾಗೂ ಸಾಮಾಜಿಕ ಕಾರ್ಯದ ಪ್ರಯುಕ್ತ ಭಾರತ ರತ್ನ ಕೊಡಬೇಕು ಅಂತ ಮನವಿ ಮಾಡ್ತಿದ್ದೇವೆ.
.