Friday, September 12, 2025
20.8 C
Bengaluru
Google search engine
LIVE
ಮನೆ#Exclusive Newsಗುರುಗ್ರಾಮ್ ಬಳಿ ಬಾಂಬ್ ಸ್ಫೋಟ

ಗುರುಗ್ರಾಮ್ ಬಳಿ ಬಾಂಬ್ ಸ್ಫೋಟ

ಚಂಡೀಗಢ: ಗುರುಗ್ರಾಮ್‌ನಲ್ಲಾದ  ಬಾಂಬ್ ಸ್ಫೋಟದ  ಹಿಂದೆ ತಮ್ಮ ಕೈವಾಡವಿರುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ  ಸಹಚರರು ಹೊಣೆ ಹೊತ್ತುಕೊಂಡಿದ್ದಾರೆ.

ಇದು ಕೇವಲ ಸಣ್ಣ ಮಟ್ಟದ ಸ್ಫೋಟ, ಇನ್ನೂ ಡೊಡ್ಡ ಮಟ್ಟದಲ್ಲಿ ಸ್ಫೋಟಗೊಳಿಸುವ ನಮ್ಮ ಬಳಿ ಇದೆ. ಬಾರ್‌ನ ಮಾಲೀಕ ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಜೊತೆಗೆ ತೆರಿಗೆಯಿಂದ ವಂಚಿಸುವ ಮೂಲಕ ದೇಶದ ಸ್ಥಿತಿಗೆ ಹಾನಿಯುಂಟು ಮಾಡುತ್ತಿದ್ದಾನೆ ಎಂದು ಬಿಷ್ಣೋಯ್ ಗ್ಯಾಂಗ್ ಆರೋಪಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಚಿನ್ ಎಂಬಾತನನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮಂಗಳವಾರ (ಡಿ.10) ಬಾರ್‌ನ ಹೊರಗೆ ಆರೋಪಿ ಎರಡು ಬಾಂಬ್‌ಗಳನ್ನ ಸ್ಫೋಟಿಸಿದ್ದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಆರೋಪಿ ಘಟನೆಯ ವೇಳೆ ಅಮಲಿನಲ್ಲಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಐಪಿಎಸ್ ಅಧಿಕಾರಿ ವಿಕಾಸ್ ಅರೋರಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಹಾಗೂ ಭದ್ರತೆಗಾಗಿ ಬಾಂಬ್ ನಿಷ್ಕ್ರೀಯ ತಂಡವನ್ನು ಕರೆಯಿಸಲಾಯಿತು. ಘಟನೆಯಿಂದ ಅಲ್ಲಿದ್ದ ವಾಹನ ಹಾಗೂ ಬೋರ್ಡ್ಗೆ ಸಣ್ಣಪುಟ್ಟ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೃತ್ಯದ ಹಿಂದಿನ ಮೂಲ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments