Thursday, September 11, 2025
25.8 C
Bengaluru
Google search engine
LIVE
ಮನೆ#Exclusive Newsನಂದಿನಿ ದೋಸೆ ಹಿಟ್ಟು ಶೀಘ್ರ ಮಾರುಕಟ್ಟೆಗೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

ನಂದಿನಿ ದೋಸೆ ಹಿಟ್ಟು ಶೀಘ್ರ ಮಾರುಕಟ್ಟೆಗೆ: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

ನಂದಿನಿ ಬ್ಯಾಂಡ್ ಅಡಿ ಡಿಸೆಂಬರ್ ಅಂತ್ಯದೊಳಗೆ ದೋಸೆಹಿಟ್ಟು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಈಗಾಗಲೇ ಟೆಂಡ‌ರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಾರದೊಳಗೆ ಕಾರ್ಯಾದೇಶ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೂ, ದೋಸೆ ಹಿಟ್ಟಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಹಜ ಪ್ರಕ್ರಿಯೆ ಎಂದ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ

ಬೆಂಗಳೂರು(ಡಿ.08): ಕೇರಳದ ಖಾಸಗಿ ಕಂಪನಿ ಮಾಲೀಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ನಂದಿನಿ ಬ್ರಾಂಡ್ ದೋಸೆ ಹಿಟ್ಟು ಮಾರುಕಟ್ಟೆಗೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ನ೦ದಿನಿ ಬ್ಯಾಂಡ್ ಅಡಿ ದೋಸೆ ಹಿಟ್ಟು ಡಿಸೆ೦ಬರ್ ಅಂತ್ಯದೊಳಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.

ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ನಂದಿನಿ ಬ್ಯಾಂಡ್ ಅಡಿ ಡಿಸೆಂಬರ್ ಅಂತ್ಯದೊಳಗೆ ದೋಸೆಹಿಟ್ಟು ಮಾರುಕಟ್ಟೆಗೆ ಪದಾರ್ಪಣೆ ಮಾಡಲಿದೆ. ಈಗಾಗಲೇ ಟೆಂಡ‌ರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಾರದೊಳಗೆ ಕಾರ್ಯಾದೇಶ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆಗೂ, ದೋಸೆ ಹಿಟ್ಟಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಹಜ ಪ್ರಕ್ರಿಯೆ ಎಂದರು.

ಖಾಸಗಿ ಕಂಪನಿಯೊಂದು ಉತ್ಪಾದಿಸಿದ ದೋಸೆ ಹಿಟ್ಟನ್ನು ನಂದಿನಿ ಬ್ರಾಂಡ್ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಪ್ರಸ್ತಾವನೆ ಆರು ತಿಂಗಳ ಹಿಂದೆಯೇ ಬಂದಿತ್ತು. ಕೆಎಂಎಫ್ ಉತ್ಪಾದನೆ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ ಬ್ರಾಂಡ್ ಬಳಕೆಗೆ ಅವಕಾಶ ಕಲ್ಪಿಸಿದರೆ ಸಮಸ್ಯೆ ಎದುರಾಗುವ ಅಪಾಯವಿತ್ತು. ದೋಸೆ ಹಿಟ್ಟು ಮಾರಾಟಕ್ಕೆ ಅನುಮತಿ ಕೊಟ್ಟಿದ್ದರೆ ವಾರ್ಷಿಕ 6 ರಿಂದ 10 ಲಕ್ಷದಷ್ಟು ಲಾಭ ಆಗುತ್ತಿತ್ತು. ಇಷ್ಟು ಹಣಕ್ಕಾಗಿ ನಂದಿನಿ ಬ್ರಾಂಡ್‌ಗೆ ಧಕ್ಕೆಯಾ ಗುವಂತೆ ನಿರ್ಧಾರ ಕೈಗೊಳ್ಳಬಾರದೆಂದು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದರು.

ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ಗೆ ಲಾಡು ಉತ್ಪಾದನೆಗೆ ಪೂರೈಕೆಯಾದ ತುಪ್ಪ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡು ಸ್ವಂತ ದೋಸೆ ಹಿಟ್ಟು ಉತ್ಪಾದಿಸುವ ಘಟಕ ಸ್ಥಾಪಿಸಿ ನಮ್ಮ ಸಿಬ್ಬಂದಿಯಿಂದಲೇ ಉತ್ಪಾದಿಸಿ ಮಾರು ಕಟ್ಟೆಗೆ ಪೂರೈಸುವ ಪ್ರಸ್ತಾವ ಮಂಡಿಸಲು ಸೂಚಿಸಿದ್ದು, ಈಗ ಟೆಂಡರ್ ಕೂಡ ಮುಕ್ತಾ ಯವಾಗಿದೆ. ಮುಖ್ಯಮಂತ್ರಿಯವರು ಅನುಮತಿ ಪಡೆದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದೇವೆ ಎಂದು ಹೇಳಿದರು.

ಬಾಯ್ಕಾಟ್ ಐಡಿ ಪ್ರಾಡೆಕ್ಟ್ ಅಭಿಯಾನ

ನಂದಿನಿ ಬ್ಯಾಂಡ್ ದೋಸೆ ಹಿಟ್ಟಿಗೆ ಅಡ್ಡಗಾಲು ಹಾಕಿರುವ ಕಳೆದರಡು ದಶಕಗಳಿಂದ ದೋಸೆ, ಇಡ್ಲಿ ಹಿಟ್ಟು ಮಾರಾಟದಲ್ಲಿ ಪಾರುಪತ್ಯ ಮೆರೆದಿರುವ ಐಡಿ ಕಂಪನಿ ಉತ್ಪನ್ನಗಳನ್ನು ಖರೀದಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪರ ಸಂಘಟನೆಗಳು ‘ಬಾಯ್ಕಟ್ ಐಡಿಪ್ರಾಡೆಕ್ಟ್’ ಅಭಿಯಾನ ಆರಂಭಿಸಿದ್ದು ಲಕ್ಷಾಂತರ ಮಂದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments