Thursday, September 11, 2025
27.5 C
Bengaluru
Google search engine
LIVE
ಮನೆ#Exclusive Newsಬೆಳಗಾವಿ ಅಧಿವೇಶನಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತೆ ಸರ್ಕಾರ? ಪ್ರಸ್ತಾವನೆ ನೋಡಿದ್ರೆ ಶಾಕ್ ಆಗ್ತೀರಾ!

ಬೆಳಗಾವಿ ಅಧಿವೇಶನಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತೆ ಸರ್ಕಾರ? ಪ್ರಸ್ತಾವನೆ ನೋಡಿದ್ರೆ ಶಾಕ್ ಆಗ್ತೀರಾ!

ಬೆಂಗಳೂರು: ಡಿಸೆಂಬರ್ 9 ರಿಂದ 20ರವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಬೆಂಗಳೂರಿನಿಂದ ಎಲ್ಲ ಸಚಿವರು ಶಾಸಕರು, ಅಧಿಕಾರಿಗಳು ಬೆಳಗಾವಿಗೆ ಶಿಫ್ಟ್ ಆಗಲಿದ್ದಾರೆ. ಹಾಗಾಗಿ ಅವರುಗಳ ಖರ್ಚು ವೆಚ್ಷಗಳಿಗಾಗಿ ಸರ್ಕಾರ ಎಷ್ಟು ಖರ್ಚು ಮಾಡುತ್ತೆ ಗೊತ್ತಾ? ಈ ಅಧಿವೇಶನದ ವೆಚ್ಚದ ಕುರಿತಾಗಿ ಅಲ್ಲಿಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಈ ಪ್ರಸ್ತಾವನೆಯ ಲೆಕ್ಕ ನೋಡಿದ್ರೆ ನೀವು ಶಾಕ್ ಆಗ್ತೀರಾ…!

ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ

ಹೌದು, ಬೆಳಗಾವಿ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಬರೊಬ್ಬರಿ 13 ಕೋಟಿ ರೂ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ 7 ಕೋಟಿ ರೂ ಖರ್ಚು, ಹಿಂದಿನ ವರ್ಷದ ಚಳಿಗಾಲದ ಅಧಿವೇಶನದ ವೆಚ್ಚವನ್ನು ಆಧರಿಸಿ ಈ ವರ್ಷದ ವೆಚ್ಚಗಳ ಪ್ರಸ್ತಾಪವನ್ನು ಮಾಡಿದ್ದಾರೆ.

ಊಟದ ಖರ್ಚಿಗೆ 2.80 ಕೋಟಿ ವೆಚ್ಚ!

ಇನ್ನು ಈ ಸಂಧರ್ಭದಲ್ಲಿ ಸಚಿವ, ಶಾಸಕ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಊಟದ ಖರ್ಚಿಗೆ 2.80 ಕೋಟಿ ವೆಚ್ಚ, ಗಣ್ಯರು ತಂಗುವ ಸ್ಥಳಗಳಲ್ಲಿ ಇಂಟರ್‌ನೆಟ್‌, ದೂರವಾಣಿಗೆ 44 ಲಕ್ಷ, ವಾಹನಗಳಿಗೆ ಇಂಧನಕ್ಕೆ 45 ಲಕ್ಷ ರೂ. ಖರ್ಚಾಗಲಿದೆ.

ಕಟ್ಟಡಗಳ ಹೂವಿನ ಅಲಾಂಕಾರಕ್ಕೆ ಲಕ್ಷಾಂತರ ರೂ. ಖರ್ಚು!

ಅಧಿವೇಶನದ ವೇಳೆ ತುರ್ತು ಬಾಡಿಗೆ ವಾಹನಗಳಿಗೆ 25 ಲಕ್ಷ, ವಾಹನ ಚಾಲಕರಿಗೆ ವಸತಿಗೆ 20 ಲಕ್ಷ, 15 ಲಕ್ಷ ರೂ. ಕಟ್ಟಡಗಳನ್ನು ಹೂವಿನಿಂದ ಅಲಂಕರಿಸಲು ಶುಚಿಗೊಳಿಸುವಿಕೆ, ಬಿಸಿನೀರಿನ ವ್ಯವಸ್ಥೆಗಳು ಮತ್ತು ಲೇಖನ ಸಾಮಗ್ರಿಗಳಿಗೆ ಹೆಚ್ಚುವರಿಯಾಗಿ 25 ಲಕ್ಷ ರೂ. ವ್ಯಯಿಸಬೇಕಾಗುತ್ತದೆ.

ಒಟ್ಟು 13 ಕೋಟಿ ವೆಚ್ಚದ ಪ್ರಸ್ತಾವನೆ

ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ವಾಹನ ಚಾಲಕರ ವೆಚ್ಚಕ್ಕಾಗಿ ಎಸ್‌ವಿಎಸ್‌ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 15 ಲಕ್ಷ ರೂ., ಅಧಿವೇಶನ ಮಾಹಿತಿ ಕೈಪಿಡಿಗಳು ಮತ್ತು ವಿವಿಧ ಗುರುತಿನ ಚೀಟಿಗಳಿಗೆ 4 ಲಕ್ಷ ರೂ ಖರ್ಚು, ಇತರೆ ವೆಚ್ಚಗಳು ಸೇರಿದಂತೆ ಒಟ್ಟು 13 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments