ನಮ್ಮ ವಿರುದ್ಧದ ಪ್ರತಿಯೊಂದು ದಾಳಿಯು ನಮ್ಮನ್ನು ಬಲಪಡಿಸುತ್ತದೆ ಮತ್ತು ಪ್ರತಿ ಅಡೆತಡೆಗಳು ಹೆಚ್ಚು ಚೇತರಿಸಿಕೊಳ್ಳಲು ಅದಾನಿ ಗ್ರೂಪ್‌ಗೆ ಮೆಟ್ಟಿಲು ಆಗುತ್ತವೆ ಎಂದು ರಾಜಸ್ಥಾನದ ಜೈಪುರದಲ್ಲಿ ಗೌತಮ್ ಅದಾನಿ ಹೇಳಿದ್ದಾರೆ. ಅದಾನಿ ಗ್ರೂಪ್ ಯುಎಸ್ ಆರೋಪಗಳನ್ನು ನಿರಾಕರಿಸಿದೆ, ಅವುಗಳನ್ನು ಆಧಾರರಹಿತ ಎಂದು ವಿವರಿಸಿದೆ.
ನವದೆಹಲಿ: ತಮ್ಮ ಮೇಲಿನ ಯುನೈಟೆಡ್ ಸ್ಟೇಟ್ಸ್ ಮಾಡಿರುವ ಆರೋಪಗಳಿಗೆ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಂದು ದಾಳಿಯು ನಮ್ಮನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ. ಪ್ರತಿಯೊಂದು ದಾಳಿಯು ನಮ್ಮನ್ನು ಬಲಪಡಿಸುತ್ತದೆ. ಪ್ರತಿ ಅಡೆತಡೆಗಳು ಅದಾನಿ ಗ್ರೂಪ್‌ಗೆ ಮೆಟ್ಟಿಲು ಆಗುತ್ತವೆ ಎಂದು ರಾಜಸ್ಥಾನದ ಜೈಪುರದಲ್ಲಿ ನಡೆದ 51ನೇ ರತ್ನ ಮತ್ತು ಆಭರಣ ಪ್ರಶಸ್ತಿ ಸಮಾರಂಭದಲ್ಲಿ ಗೌತಮ್ ಅದಾನಿ ಹೇಳಿದ್ದಾರೆ.
ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ 265 ಮಿಲಿಯನ್ ಡಾಲರ್ ಲಂಚದ ಯೋಜನೆಯ ಭಾಗವಾಗಿದ್ದಾರೆ ಎಂಬ ಅಮೆರಿಕಾ ಅಧಿಕಾರಿಗಳ ಆರೋಪಗಳಿಗೆ ಇಂದು ಸಂಜೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. “ಎರಡು ವಾರಗಳ ಹಿಂದೆ ನಾವು ಅದಾನಿ ಗ್ರೀನ್ ಎನರ್ಜಿ ವಿಷಯಕ್ಕೆ ಸಂಬಂಧಿಸಿದಂತೆ ಯುಎಸ್ನಿಂದ ಆರೋಪಗಳನ್ನು ಎದುರಿಸಿದ್ದೇವೆ. ನಾವು ಇಂತಹ ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ” ಎಂದು ಹೇಳಿದ್ದಾರೆ.
ಅದಾನಿ ಗ್ರೂಪ್‌ನ ಒಂದು ಅಂಗವಾಗಿರುವ ಅದಾನಿ ಪವರ್ ಪ್ರಸ್ತುತ 265 ಯುಎಸ್ ಡಾಲರ್ ಮಿಲಿಯನ್ ಮೌಲ್ಯದ ಲಂಚ ಪ್ರಕರಣದ ತನಿಖೆ ನಡೆಸುತ್ತಿದೆ. ಕಳೆದ ವಾರವಷ್ಟೇ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಅದಾನಿ ಗ್ರೂಪ್‌ನ ಪ್ರಮುಖ ವ್ಯಕ್ತಿಗಳಾದ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಸೆಕ್ಯುರಿಟೀಸ್ ಟ್ರೇಡ್‌ಗಳು ಮತ್ತು ವೈರ್ ವರ್ಗಾವಣೆಗಳಿಗೆ ಸಂಬಂಧಿಸಿದ ಆರೋಪಗಳನ್ನು ಮಾಡಲಾಗಿತ್ತು.
ಅದಾನಿ ಗ್ರೂಪ್‌ನ ಯಶಸ್ಸುಗಳ ಹೊರತಾಗಿಯೂ ನಾವು ಎದುರಿಸಿದ ಸವಾಲುಗಳು ಇನ್ನೂ ದೊಡ್ಡದಾಗಿದೆ. ಈ ಸವಾಲುಗಳು ನಮ್ಮನ್ನು ಕುಗ್ಗಿಸಲಿಲ್ಲ. ಅದರ ಬದಲಿಗೆ, ಅವು ನಮ್ಮನ್ನು ಕಠಿಣಗೊಳಿಸಿವೆ. ಪ್ರತಿ ಪತನದ ನಂತರ ನಾವು ಮತ್ತೆ ಮೇಲೇಳುತ್ತೇವೆ, ಮೊದಲಿಗಿಂತ ಬಲಶಾಲಿಯಾಗಿ ಮೊದಲಿಗಿಂತ ಹೆಚ್ಚು ಚೇತರಿಸಿಕೊಳ್ಳುತ್ತೇವೆ ಎಂಬ ಅಚಲವಾದ ನಂಬಿಕೆ ನಮಗಿದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಏನಿದು ಘಟನೆ?:
ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2,029 ಕೋಟಿ ರೂ. (265 ಮಿಲಿಯನ್ ಡಾಲರ್) ಲಂಚವನ್ನು ಪಾವತಿಸಿದ ಆರೋಪದಲ್ಲಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿಯ ಮೇಲೆ ದೋಷಾರೋಪ ಹೊರಿಸಲಾಗಿದೆ. ಈ ಲಂಚಗಳನ್ನು 2020 ಮತ್ತು 2024 ರ ನಡುವೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿದೆ.