Friday, November 21, 2025
20 C
Bengaluru
Google search engine
LIVE
ಮನೆ#Exclusive NewsTop Newsಗುಜರಾತ್‌: ಯುವತಿಯನ್ನು ಕೊಂದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಹಂತಕ!

ಗುಜರಾತ್‌: ಯುವತಿಯನ್ನು ಕೊಂದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಹಂತಕ!

ಸೂರತ್: ಇತ್ತೀಚೆಗೆ ಗುಜರಾತ್‌ನ ರೈಲು ನಿಲ್ದಾಣದ ಸಮೀಪ ಅತ್ಯಾಚಾರಕ್ಕಾಗಿ ಯುವತಿಯ ಕೊಲೆಯಾಗಿತ್ತು. ಕೇಸ್‌ನ ಆರೋಪಿಯ ವಿಚಾರಣೆ ಸಂದರ್ಭದಲ್ಲಿ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ. ಈತ ಯುವತಿಯ ಕೊಲೆ ಮಾಡಿದ್ದು ಅಲ್ಲದೇ ಮತ್ತೆ ಸ್ಥಳಕ್ಕೆ ಹೋಗಿ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ನವೆಂಬರ್ 14 ರಂದು ಉದ್ವಾಡ ರೈಲು ನಿಲ್ದಾಣದ ಸಮೀಪ 19 ವರ್ಷದ ಯುವತಿಯ ಕೊಲೆಯಾಗಿತ್ತು. ಹಳಿಯ ಮೇಲೆ ಆಕೆಯ ಶವ ಪತ್ತೆಯಾಗಿತ್ತು. ಹಂತಕ ಹರಿಯಾಣದ ರೋಹ್ಟಕ್ ನಿವಾಸಿ ರಾಹುಲ್ ಜಾಟ್ ಅಲಿಯಾಸ್ ಭೋಲು ಕರ್ಮವೀರ್ ಈಶ್ವರ್ ಜಟ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಳೆದ 11 ದಿನಗಳಲ್ಲಿ 5 ಮಂದಿಯ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಗುಜರಾತ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿ ಕೊಂದು ಅತ್ಯಾಚಾರ!

ರೈಲು ನಿಲ್ದಾಣದ ಸಮೀಪ ಮನೆಯಿಂದ ಟ್ಯೂಷನ್‌ಗೆ ಹೋಗುತ್ತಿದ್ದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆ ನಂತರ ಆಕೆಯ ಶವದೊಂದಿಗೆ ಸಂಭೋಗ ನಡೆಸಿದ್ದಾನೆ. ಕೊಲೆಯ ಬಳಿಕ ರೈಲು ನಿಲ್ದಾಣಕ್ಕೆ ಮರಳಿ ಹಣ್ಣು, ನೀರಿನ ಬಾಟಲಿ ಖರೀದಿಸಿ ಮತ್ತೆ ಕೊಲೆ ಮಾಡಿದ್ದ ಸ್ಥಳಕ್ಕೆ ತೆರಳಿದ ಹಂತಕ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕೊನೆಗೆ ಯುವತಿ ಸ್ನೇಹಿತರು, ಪೋಷಕರು ಹುಡುಕುತ್ತಾ ಬಂದಾಗ ಆ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ವಿಚಾರಣೆ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಹಂತಕನನ್ನು ಕರೆತಂದು ಮಹಜರು ಮಾಡಿದ್ದಾರೆ. ಸಿಸಿಟಿವಿ ಚಲನವಲನ ಕೃತ್ಯದ ಸಂದರ್ಭದಲ್ಲಿ ಬಿಟ್ಟು ಹೋಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹಂತಕನು ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಟ್ಟು 5 ಮಂದಿಯ ಕೊಲೆ

ಯುವತಿಯನ್ನು ಕೊಲ್ಲುವ ಮೊದಲು ಇಬ್ಬರನ್ನು, ಆ ನಂತರ ಇಬ್ಬರನ್ನು ರೈಲಿನಲ್ಲಿ ಕೊಂದಿದ್ದಾನೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದುಬಂದಿದೆ. ಐದನೇ ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾದ ರಾಹುಲ್ ಎಡಗಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಇತ್ತೀಚೆಗಷ್ಟೆ ಕೊಲೆಗೈಯುವ ಮುನ್ನ ರಾಹುಲ್ ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಟ್ರಕ್ ಕಳ್ಳತನ ಮತ್ತು ಶಸ್ತ್ರಾಸ್ತ್ರ ಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನಂತೆ. 2019ರಲ್ಲಿ ಜೋಧ್‌ಪುರ ಪೊಲೀಸರಿಂದ ಬಂಧಿನಕ್ಕೊಳಗಾಗಿದ್ದ ರಾಹುಲ್‌ ನವೆಂಬರ್ 14 ರಂದು ಜೈಲಿನಿಂದ ಬಿಡುಗಡೆಯಾಗಿದ್ದನು.

ಜೋಧ್‌ಪುರ ಜೈಲಿನಿಂದ ಹೊರಬಂದ ನಂತರ ಒಟ್ಟು ಐದು ಕೊಲೆಗಳನ್ನು ಮಾಡಿದ್ದಾನೆ. ಹೌರಾ ಬಳಿಯ ಕೈತಾರ್ ಎಕ್ಸ್‌ಪ್ರೆಸ್‌ನಲ್ಲಿ ವೃದ್ಧ, ಪುಣೆ-ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯ ಕೊಲೆ, ಯಾದಗಿರಿ ಗುಟ್ಟಾ ರೈಲು ನಿಲ್ದಾಣದ ಬಳಿ ಆಂಧ್ರ ಮಹಿಳೆಯೊಬ್ಬಳ ಹತ್ಯೆ, ಕರ್ನಾಟಕದ ಮೂಲ್ಕಿಯಲ್ಲಿ ರೈಲು ಪ್ರಯಾಣಿಕನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments