Friday, May 2, 2025
30.3 C
Bengaluru
LIVE
ಮನೆSportsIPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಬರೆದ ಪಂತ್ – 27 ಕೋಟಿಗೆ ಲಕ್ನೋ...

IPL 2025 Auction: ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಬರೆದ ಪಂತ್ – 27 ಕೋಟಿಗೆ ಲಕ್ನೋ ಪಾಲು

ಐಪಿಎಲ್‌ 2025 ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌ ಇತಿಹಾಸದಲ್ಲೆ ದಾಖಲೆ ಬರೆದಿದ್ದಾರೆ. ರಿಷಬ್ ಪಂತ್ ಬರೋಬ್ಬರಿ 27 ಕೋಟಿಗೆ ಲಕ್ನೋ ಸೂಪರ್‌ಜೈಂಟ್ಸ್‌ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ರಿಷಬ್‌ಗಾಗಿ ಲಕ್ನೋ ಫ್ರಾಂಚೈಸಿ ಮೊದಲು ಬಿಡ್‌ ಮಾಡಿತು. ಬಳಿಕ ಆರ್‌ಸಿಬಿ, ಎಸ್‌ಆರ್‌ಹೆಚ್‌ ಬಿಡ್‌ ಮಾಡಿದವು. 20.75 ಕೋಟಿಗೆ ಲಕ್ನೋ ಬಿಡ್‌ ಮಾಡಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಟಿಎಂ ಬಳಸುವುದಾಗಿ ಹೇಳಿತು.

ಎಲ್‌ಎಸ್‌ಜಿ ಬಿಡ್‌ ಮೊತ್ತವನ್ನು 27 ಕೋಟಿಗೆ ಏರಿಸಿದ್ದರಿಂದ ಡೆಲ್ಲಿ ಹಿಂದೆ ಸರಿಯಿತು. ಅಂತಿಮವಾಗಿ ಪಂತ್‌ ದಾಖಲೆ ಮೊತ್ತಕ್ಕೆ ಲಕ್ನೋ ಪಾಲಾದರು.

ಐಪಿಎಲ್‌ ವೃತ್ತಿ ಜೀವನದಲ್ಲಿ ಈವರೆಗೆ 107 ಪಂದ್ಯಗಳನ್ನಾಡಿರುವ ರಿಷಬ್‌ ಪಂತ್‌ 3,284 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ.

ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿದ್ದರು. ಟೀಂ ಇಂಡಿಯಾ ಸೋತ ಹೊರತಾಗಿಯೂ ಪಂತ್‌ ಅವರ ಬ್ಯಾಟಿಂಗ್‌ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಸಹಯವಾಗಿಯೇ ಜನಪ್ರಿಯತೆ ಹೆಚ್ಚಿಸಿತ್ತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments