Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop Newsಮುಡಾ ಹಗರಣ ಪ್ರಕರಣ : ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕನಿಗೆ ಇಡಿ ಗ್ರಿಲ್

ಮುಡಾ ಹಗರಣ ಪ್ರಕರಣ : ಸಿದ್ದರಾಮಯ್ಯ ಖಾಸಗಿ ಆಪ್ತ ಸಹಾಯಕನಿಗೆ ಇಡಿ ಗ್ರಿಲ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳ ಕಂಟಕ ಯಾವಾಗ ಯಾರ ಬುಡಕ್ಕೆ ಬರುತ್ತದೆಯೋ ಗೊತ್ತಿಲ್ಲ ಎಂಬುದು ಸಿದ್ದರಾಮಯ್ಯ ಆಪ್ತರು ಊಹಿಸಿರಲಿಲ್ಲ. ಒಂದೆಡೆ ಲೋಕಾಯುಕ್ತ ಪೊಲೀಸರು, ಮತ್ತೊಂದ್ಕಡೆ ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ಕೂಡಾ ಹಗರಣವನ್ನು ಬಗೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್ ಅಲಿಯಾಸ್ ಎಸ್‌ಜಿ ದಿನೇಶ್‌ಕುಮಾರ್‌ರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಇಡಿ ಕಚೇರಿಯಲ್ಲಿ 14 ಸೈಟುಗಳ ಬಗ್ಗೆ ಇಡಿ ಅಧಿಕಾರಿಗಳು ಪ್ರಶ್ನೆ ಕೇಳಿದ್ದಾರೆ. ಪ್ರಮುಖವಾಗಿ ಪಾರ್ವತಿಯವರ ಪತ್ರಕ್ಕೆ ಕುಮಾರ್ ಸಹಿ ಹಾಕಿದ್ದ ಬಗ್ಗೆ ವಿಚಾರಣೆ ನಡೆಸಲಾಗಿದೆ.

ಸಿಟಿ ಕುಮಾರ್ ಸಿದ್ದರಾಮಮಯ್ಯನವರ ಖಾಸಗಿ ಆಪ್ತ ಸಹಾಯಕನಾಗಿದ್ದು, ಸ್ಥಳೀಯ ಕಾರ್ಯಕ್ರಮ, ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. 2014ರಿಂದಲೂ ಕೇಸ್ ಪಾಲೋಅಪ್ ಮಾಡುತ್ತಿದ್ದ ಕುಮಾರ್, ಪಾರ್ವತಿ ಅವರ ಪರವಾಗಿ ಪ್ರತಿ ಹಂತದಲ್ಲೂ ಅರ್ಜಿ ವಿಲೇವಾರಿ ಮಾಡಿದ್ದರು. ಇದೇ ಕುಮಾರ್ ಅರ್ಜಿ ಹಾಕಿ ಪಾರ್ವತಿಯವರ ಹೆಸರಿಗೆ ಸೈಟ್ ಮಾಡಿಕೊಟ್ಟಿದ್ದರು. ಅಲ್ಲದೇ, 2022ರಲ್ಲಿ ಖಾತೆಗಾಗಿ ಪಾರ್ವತಿಯವರ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೂ ಇದೇ ಸಿಟಿ ಕುಮಾರ್ ಸಹಿ ಮಾಡಿದ್ದ ಆರೋಪವಿದೆ. ಹೀಗಾಗಿ ಪ್ರಕರಣದಲ್ಲಿ ತಮ್ಮ ಪಿಎ ಮೂಲಕ ಸಿಎಂ ಪ್ರಭಾವ ಬಳಸಿದ್ದಾರೆ ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.

ಹಗರಣ ಸಂಬಂಧ ಕುಮಾರ್‌ ನಾಯಕ್‌ ಇವತ್ತು ಇಡಿ ವಿಚಾರಣೆ ಎದುರಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಸದ್ಯ ರಾಯಚೂರು ಕಾಂಗ್ರೆಸ್ ಸಂಸದರಾಗಿದ್ದಾರೆ. ಈ ಹಿಂದೆ ಮೈಸೂರಿನ ಲೋಕಾ ವಿಚಾರಣೆ ಎದುರಿಸಿದ್ದ ಕುಮಾರ್ ನಾಯಕ್ ಇವತ್ತು ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಕುಮಾರ್ ನಾಯಕ್ ವಿಚಾರಣೆ ಏಕೆ?

ಭೂ ಪರಿವರ್ತನೆ ಸಂದರ್ಭದಲ್ಲಿ ಇದೇ ಕುಮಾರ್ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಕುಮಾರ್ ನಾಯಕ್ ಮತ್ತು ಸೆಲ್ವ ಕುಮಾರ್ ಅವಧಿಯಲ್ಲಿ ಕೃಷಿ ಭೂಮಿಯನ್ನ ಕುಮಾರ್ ನಾಯಕ್ ಪರಿವರ್ತನೆ ಮಾಡಿದ್ದರು. 2000ನೇ ಇಸವಿಯಲ್ಲಿ ಕೃಷಿಭೂಮಿಯಾಗಿ ಪರಿವರ್ತನೆ ಮಾಡಲಾಗಿತ್ತು. ಮುಡಾ ನೋಟಿಫೈ ಮಾಡಿ ಜಮೀನು ವಶಕ್ಕೆ ಮುಂದಾಗಿತ್ತು. ಈ ವೇಳೆ ಡಿಸಿಯಾಗಿದ್ದ ಕುಮಾರ್ ನಾಯಕ್‌ಗೆ ಭೂ ಸ್ವಾಧೀನ ಕೈಬಿಡುವಂತೆ ದೇವರಾಜು ಪತ್ರ ಬರೆದಿದ್ದ. ಆಗ ಕುಮಾರ್ ನಾಯಕ್, ಮುಡಾ ಮತ್ತು ತಹಶೀಲ್ದಾರ್‌ಗೆ ಸ್ಥಳ ಪರಿಶೀಲಿಸುವಂತೆ ಸೂಚಿಸಿದ್ದರು. ಸ್ಥಳ ಪರಿಶೀಲನೆ ಮಾಡದೆಯೇ ವರದಿ ನೀಡಿದ್ದ ತಹಶೀಲ್ದಾರ್ ವರದಿ ನೀಡಿದ್ದರು ಎನ್ನಲಾಗಿದೆ. ತಹಶೀಲ್ದಾರ್ ವರದಿ ಆಧರಿಸಿ 2003ರಲ್ಲಿ ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಲಾಗಿದೆ. ನಂತರ 2004ರಲ್ಲಿ ಸಿಎಂ ಬಾಬೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜು ಭೂಮಿಯನ್ನು ಮಾರಾಟ ಮಾಡಿದ್ದರು. ಈ ಅಂಶಗಳನ್ನ ಆಧರಿಸಿ ಕುಮಾರ್‌ ನಾಯಕ್‌ರನ್ನ ವಿಚಾರಣೆಗೊಳಪಡಿಸಲಾಗಿದೆ.

ಇಡಿ ತನಿಖೆ ಮಾಡುತ್ತಿರುವುದು ಸುಳ್ಳು ಕೇಸ್ ಎಂದ ಸಿಎಂ

ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಾರಿ ನಿರ್ದೇಶನಾಲಯದವರು ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಲಿ, ಬಿಡಲಿ, ನಾವು ಅಡ್ಡಿಯಾಗಲ್ಲ. ಆದರೆ, ತನಿಖೆ ಮಾಡುತ್ತಿರುವುದು ಸುಳ್ಳು ಕೇಸ್ ಎಂದು ಹೇಳಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments