ಉದ್ಧವ್ ಠಾಕ್ರೆ ಬಣದ ಶಿವ ಸೇನೆಯು ಇಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಭರವಸೆ, ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರಗೊಳಿಸುವುದು ಮತ್ತು ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ.
- ಶಿಕ್ಷಣ ಮಹಾರಾಷ್ಟ್ರದಲ್ಲಿ ಜನಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
- ಪಿಂಚಣಿ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಆರಂಭಿಸಲಾಗುವುದು
- ಆಹಾರ ಭದ್ರತೆ
- ರೈತರಿಗೆ ನಷ್ಟವಾಗದಂತೆ ಗೋಧಿ, ಅಕ್ಕಿ, ಎಣ್ಣೆ, ಬೇಳೆಕಾಳುಗಳು ಮತ್ತು ಸಕ್ಕರೆಯಂತಹ ಐದು ಅಗತ್ಯ ವಸ್ತುಗಳ ಬೆಲೆಗಳನ್ನು ಸ್ಥಿರವಾಗಿ ಇರಿಸಲಾಗುವುದು.
- ಸಂಸ್ಕೃತಿ ಪ್ರತಿ ಜಿಲ್ಲೆಯಲ್ಲೂ ಶಿವಾಜಿ ಮಹಾರಾಜರ ಸ್ಫೂರ್ತಿದಾಯಕ ಮಂದಿರ ನಿರ್ಮಿಸಲಾಗುವುದು.
- ಆರೋಗ್ಯ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.
- ಮಹಿಳೆಯರು ಮಹಿಳೆಯರಿಗೆ ನೀಡುವ ಆರ್ಥಿಕ ಸಹಾಯವನ್ನು ಹೆಚ್ಚಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಲಾಗುವುದು.
- ಮಹಾರಾಷ್ಟ್ರದ ಮಣ್ಣಿನ ಪುತ್ರರಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಮತ್ತು ಕೈಗಾರಿಕಾ ಕೇಂದ್ರವನ್ನು ರಚಿಸಲಾಗುವುದು.