ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಯಾರಿಗೆ ಗೊತ್ತಿಲ್ಲ ಹೇಳಿ? ಸುಧಾ ಮೂರ್ತಿ-ನಾರಾಯಣ ಮೂರ್ತಿ ದಂಪತಿಯ ಅಳಿಯ ರಿಷಿ ಸುನಕ್ ಸಹ ಮಂತ್ರಾಲಯದ ರಾಯರ ಭಕ್ತರು. ರಾಯರ ಹೆಸರಲ್ಲಿ ಪ್ರತಿ ಗುರುವಾರ ರಿಷಿ ಸುನಕ್ ಉಪವಾಸ ಮಾಡುತ್ತಾರೆ. ರಿಷಿ ಸುನಕ್ ಇಂದು ಶ್ರೀ ಗುರು ರಾಯರ ದರ್ಶನ ಪಡೆದಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸಮಾಜಸೇವಕಿ ಸುಧಾ ಮೂರ್ತಿ ಅವರು ತಮ್ಮ ಮಗಳು ಮತ್ತು ಅಳಿಯನ ಜೊತೆ ಮಠಕ್ಕೆ ಆಗಮಿಸಿ ದೇವರಿಗೆ ವಿಶೇಷ ಆರತಿ ಪೂಜೆ ಸಲ್ಲಿಸಿದರು.
ಇಂಗ್ಲೆಂಡಿನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ತಮ್ಮ ಪೋಷಕರೊಂದಿಗೆ ನಿನ್ನೆ ಬೆಂಗಳೂರಿನ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.@XpressBengaluru @NewIndianXpress pic.twitter.com/cp6rTQkXN4
— kannadaprabha (@KannadaPrabha) November 6, 2024
ಈ ವರ್ಷದ ಆರಂಭದಲ್ಲಿ, ಅಕ್ಷತಾ ಮೂರ್ತಿ ತಮ್ಮ ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿ ಈ ಮಠಕ್ಕೆ ಭೇಟಿ ನೀಡಿದ್ದರು.
ಭಾರತ ಹಿಂದೂ ಧರ್ಮದ ಮೂಲದ ಬ್ರಿಟನ್ ಪ್ರಧಾನಿಯಾಗಿದ್ದ ರಿಷಿ ಸುನಕ್ ಅವರು ಕಳೆದ ವರ್ಷ, ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ತಮ್ಮ ಪತ್ನಿಯೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪೂಜೆ ಮತ್ತು ಅಭಿಷೇಕವನ್ನು ಮಾಡಿಸಿ ದೇವಸ್ಥಾನದ ಅರ್ಚಕರು ಮತ್ತು ಸ್ವಾಮಿಗಳೊಂದಿಗೆ ಸಂವಾದ ನಡೆಸಿದ್ದರು.
ರಿಷಿ ಸುನಕ್ ಜನಿಸಿದ್ದು ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ , ಆದರೆ ಭಾರತ ಮೂಲದ ಮೊದಲ ಪ್ರಧಾನಿಯಾದಾಗ ಭಾರತೀಯರು ಅಪಾರ ಸಂತೋಷಪಟ್ಟಿದ್ದರು. ರಿಷಿ ಸುನಕ್ ಅವರು ತಮ್ಮ ಭಾರತೀಯ ಮೂಲ ಮತ್ತು ಇಲ್ಲಿನ ಧಾರ್ಮಿಕ ನಂಬಿಕೆಗಳ ಬಗ್ಗೆ ಮನಸಾರೆ ಹೊಗಳುತ್ತಾರೆ.
#WATCH | Bengaluru, Karnataka: Former Prime Minister of Britain, Rishi Sunak, his wife Akshata Murthy, author, philanthropist, and Rajya Sabha MP Sudha Murthy, and Infosys founder Narayana Murthy offer prayers at Nanjangudu Sri Raghavendra Swami’s Math.
Source: Office of Sudha… pic.twitter.com/IywSSRqkS8
— ANI (@ANI) November 5, 2024
ನನ್ನ ಭಾರತೀಯ ಮೂಲ ಮತ್ತು ಭಾರತದೊಂದಿಗಿನ ನನ್ನ ಸಂಪರ್ಕಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ… ಹೆಮ್ಮೆಯ ಹಿಂದೂ ಎಂದು ನಾನು ಹೇಳಿಕೊಳ್ಳಲು ಇಷ್ಟಪಡುತ್ತೇನೆ. ನಾನು ಯಾವಾಗಲೂ ಭಾರತ ಮತ್ತು ಭಾರತದ ಜನರೊಂದಿಗೆ ಸಂಪರ್ಕವನ್ನು ಹೊಂದಿರುತ್ತೇನೆ ಎಂದು ಹೇಳಿದ್ದರು.
ಪ್ರಧಾನಮಂತ್ರಿಯಾಗಿದ್ದಾಗ ಸುನಕ್ ಅವರು ಭಾರತದ ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಮ್ ಕಥಾದಲ್ಲಿ ಭಾಗವಹಿಸಿದರು, ಅಲ್ಲಿ ನಾನು ಮೂಲತಃ ಹಿಂದೂ ಎಂದು ಘೋಷಿಸಿಕೊಂಡಿದ್ದರು.
2022 ರಲ್ಲಿ, ಅವರು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾದರು, ಕಛೇರಿಯಲ್ಲಿ 45 ದಿನಗಳ ಅಲ್ಪಾವಧಿಯ ಅವಧಿಯನ್ನು ಹೊಂದಿದ್ದ ಲಿಜ್ ಟ್ರಸ್ ಬದಲಿಗೆ ಪ್ರಧಾನ ಮಂತ್ರಿಯಾದರು.