
ರವೀನಾ ಟಂಡನ್ ಅವರು ತಮ್ಮ 50ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮುಂತಾದವರ ಜೊತೆ ನಟಿಸಿದ್ದಾರೆ. ‘ಉಪೇಂದ್ರ’ ಮತ್ತು ‘ಕೆಜಿಎಫ್ 2’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲೂ ತಮ್ಮದೇ ಆದ ಅನನ್ಯ ಗುರುತು ಮೂಡಿಸಿದ್ದಾರೆ. ಇಬ್ಬರು ಮಕ್ಕಳನ್ನು ದತ್ತು ಪಡೆದ ಅವರು ಈಗ ಅಜ್ಜಿಯೂ ಆಗಿದ್ದಾರೆ. ಅವರ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಕುರಿತು ಕೆಲವು ಕಡಿಮೆ ತಿಳಿದಿರುವ ವಿಷಯಗಳನ್ನು ಈ ಲೇಖನ ತಿಳಿಸುತ್ತದೆ.
ನಟಿ ರವೀನಾ ಟಂಡನ್ ಅವರಿಗೆ ಈಗ 50 ವರ್ಷ. 1974ರ ಅಕ್ಟೋಬರ್ 26ರಂದು ರವೀನಾ ಜನಿಸಿದರು. ಅವರಿಗೆ ಇಂದು ಜನ್ಮದಿನ. ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಶುಭಾಶಯಗಳು ಬರುತ್ತಿವೆ. ಅವರು ಸಲ್ಮಾನ್ ಖಾನ್ ಜೊತೆ 1991ರಲ್ಲಿ ‘ಪತ್ತರ್ ಕೆ ಫೂಲ್’ ಹೆಸರಿನ ಸಿನಿಮಾ ಮಾಡಿದರು. ಗೋವಿಂದ, ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮೊದಲಾದವರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ.
2004ರಲ್ಲಿ ಅನಿಲ್ ತಡಾನಿ ಜೊತೆ ರವೀನಾ ಟಂಡನ್ ಅವರು ವಿವಾಹ ಆದರು. ಅವರು ‘ಉಪೇಂದ್ರ’ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಇದಾದ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದು ‘ಕೆಜಿಎಫ್ 2’ ಚಿತ್ರದಲ್ಲಿ. ಇದರಲ್ಲಿ ಅವರು ರಮಿಕಾ ಸೇನ್ ಹೆಸರಿನ ಪಾತ್ರ ಮಾಡಿದರು. ಅವರ ಕುರಿತ ಅಪರೂಪದ ವಿಚಾರಗಳು
16ನೇ ವಯಸ್ಸಿಗೆ
ರವೀನಾ ಟಂಡನ್ ಅವರು 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. ಆಗತಾನೇ ಅವರು ಕಾಲೇಜಿಗೆ ತೆರಳಿ ಎರಡು ವರ್ಷ ಆಗಿತ್ತು. ನಂತರ ಅವರು ಶಿಕ್ಷಣ ತೊರೆದು ಪ್ಯಾಷನ್ ಫಾಲೋ ಮಾಡಿದರು. ಅವರಿಗೆ ಸಿನಿಮಾ ಆಫರ್ ಬಂತು. ಆ ಬಳಿಕ ಹಿಂದಿರುಗಲೇ ಇಲ್ಲ.
ದತ್ತು ಮಕ್ಕಳು
21ನೇ ವಯಸ್ಸಿಗೆ ಇಬ್ಬರನ್ನು ರವೀನಾ ದತ್ತು ಪಡೆದರು. ಈ ಮೂಲಕ ಇಬ್ಬರಿಗೆ ತಾಯಿ ಆದರು. ಅವರಿಗೆ ಪೂಜಾ ಹಾಗೂ ಛಾಯಾ ಎಂದು ನಾಮಕರಣ ಮಾಡಿದ್ದಾರೆ. ಸೋದರ ಸಂಬಂಧಿ ಮಕ್ಕಳನ್ನೇ ಇವರು ದತ್ತು ಪಡೆದಿದ್ದಾರೆ. ಆಗ ರವೀನಾಗೆ ಮದುವೆ ಕೂಡ ಆಗಿರಲಿಲ್ಲ.


