ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್ ಅವರನ್ನು ಇಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಭೇಟಿ ಮಾಡಿ ಸಭೆ ಮಾಡಿದ್ದಾರೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಉಭಯ ದೇಶಗಳ ನಾಯಕರು ಫಲಪ್ರದ ಚರ್ಚೆಯನ್ನು ಮಾಡಿದ್ದಾರೆ.

ಜರ್ಮನ್ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಇಂದು ಜರ್ಮನಿಯ ಉಪ ಪ್ರಧಾನಿ ಹಾಗೂ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಿಯೆ ಸಚಿವ ಡಾ. ರಾಬರ್ಟ್ ಹಾಬೆಕ್​ ಅವರನ್ನು ಭೇಟಿ ಮಾಡಿದ್ದಾರೆ.

ನವೀನ ಮತ್ತು ನವೀಕರಣೀಯ ಊರ್ಜಾ, ಶಕ್ತಿ ಕ್ಷೇತ್ರದಲ್ಲಿ ಉಭಯ ದೇಶಗಳ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಡಾ. ರಾಬರ್ಟ್ ಹಾಬೆಕ್‌ ಅವರು ಜೋಶಿಯವರಿಗೆ ಆತಿಥ್ಯ ನೀಡಿದರು. ಅದರಲ್ಲೂ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗೊತ್ತಿ ತಾವೇ ಸ್ವತಃ ಪ್ರವೇಶ ದ್ವಾರದವರೆಗೆ ಆಗಮಿಸಿ ಜೋಶಿ ಅವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಡಾ. ರಾಬರ್ಟ್ ಹಾಬೆಕ್ ಮತ್ತು ಪ್ರಲ್ಹಾದ್​ ಜೋಶಿ ಉಭಯ ದೇಶಗಳ ನಡುವಣ ಭೇಟಿಗೆ ಆತ್ಮೀಯತೆಯ ಸ್ಪರ್ಶ ನೀಡಿದೆ. ಈ ವೇಳೆ ಸಭೆ ಮಾಡಿದ್ದು, ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಅವರು ಫಲಪ್ರದ ಚರ್ಚೆ ಮಾಡಿದ್ದು, ಇದೇ ವೇಳೆ ಹಸಿರು ಜಲಜನಕ, ಕಡಲಾಚೆಯ ಪವನ ಶಕ್ತಿ, ಜೈವಿಕ ಅನಿಲ ಮತ್ತು ಸೌರ ತ್ಯಾಜ್ಯದ ಮರುಬಳಕೆಯ ಅವಕಾಶಗಳ ಕುರಿತು ಕೂಡ ಚರ್ಚೆ ಮಾಡಲಾಗಿದೆ.

Leave a Reply

Your email address will not be published. Required fields are marked *

Verified by MonsterInsights