Friday, August 22, 2025
20.8 C
Bengaluru
Google search engine
LIVE
ಮನೆವಾಣಿಜ್ಯBDA ನಿವೇಶನದಲ್ಲಿ ಕಸದ ರಾಶಿ : ತನಿಖೆಗೆ ಐಪಿಎಸ್ ತಂಡ

BDA ನಿವೇಶನದಲ್ಲಿ ಕಸದ ರಾಶಿ : ತನಿಖೆಗೆ ಐಪಿಎಸ್ ತಂಡ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಗರದ ನಾನಾ ಕಡೆಗಳಲ್ಲಿ ಹಂಚಿಕೆಯಾದ ಬಡಾವಣೆಗಳಲ್ಲಿ ಖಾಲಿ ನಿವೇಶನ ಕಸದ ರಾಶಿ, ಭಗ್ನಾವಶೇಷ ಹಾಗೂ ಇತರೆ ಪ್ರದೇಶಗಳಲ್ಲಿ ಆಗುತ್ತಿರುವ ತೊಂದರೆ ಕುರಿತಂತೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಸಮಗ್ರ ಪರಿಶೀಲಿಸಿ ಮೂರು ಪೊಲೀಸ್ ವಿಶೇಷ ತಂಡ ರಚಿಸಿ ವರದಿ ನೀಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅದೇಶಿಸಿದ್ದಾರೆ.

ಮೂವರ ಐಪಿಎಸ್ ತಂಡ ರಚನೆ..

ಸ್ಥಳದಲ್ಲಿ ಆಗಿರುವ ನ್ಯೂನತೆಯನ್ನ ಪರಿಶೀಲಿಸಿ ಪರಿಹರಿಸಿ ವಿವರವಾದ ವರದಿಯನ್ನು ನೀಡುವಂತೆ ಆರು ವಾರದೊಳಗೆ ವಿವರ ನೀಡಬೇಕು. ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಬಿಬಿಎಂಪಿಯ ಆಯಾ ವಲಯ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ಒಳಗೊಂಡಂತೆ 19 ಮಂದಿಯನ್ನು ಪ್ರತಿವಾದಿಗಳಾಗಿ ಮಾಡಲಾಗಿದ್ದು ಆರು ವಾರದೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments