Tuesday, January 27, 2026
24 C
Bengaluru
Google search engine
LIVE
ಮನೆ#Exclusive NewsTop Newsಮತ್ತೆ ಮುನ್ನೆಲೆಗೆ ಬಂದ ಜಾತಿ ಗಣತಿ

ಮತ್ತೆ ಮುನ್ನೆಲೆಗೆ ಬಂದ ಜಾತಿ ಗಣತಿ

ಹೆಚ್ಚುತ್ತಿರುವ ಒಳಮೀಸಲು ಕೂಗು ಮತ್ತು ಮುಡಾ ನಿವೇಶನ ಹಗರಣದ ಕಾವಿನ ನಡುವೆ ಜಾತಿ ಗಣತಿ ಜಾರಿ ಮಾಡಬೇಕೆಂಬ ಒತ್ತಡ ಸರ್ಕಾರವನ್ನು ಕಾಡಲಾರಂಭಿಸಿದೆ. ನನೆಗುದಿಗೆ ಬಿದ್ದಿದ್ದ ಜಾತಿ ಗಣತಿ ವರದಿ ವಿಚಾರವನ್ನು ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರೇ ಪ್ರಸ್ತಾಪಿಸಿದ್ದರು. ಈಗ ಜಾತಿ ಗಣತಿ ವರದಿ ಬಹಿರಂಗಪಡಿಸಿ ಶಿಫಾರಸನ್ನು ಜಾರಿ ಮಾಡುವಂತೆ ಕಾಂಗ್ರೆಸ್‌ನ ಒಂದು ತಂಡ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನಕ್ಕೆ ವಿರುದ್ಧವಾದ ವಾದವೂ ಕಾಂಗ್ರೆಸ್ ನಲ್ಲಿ ಬಲಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಶುಕ್ರವಾರ ಪ್ರತಿಕ್ರಿಯೆ ನೀಡಿ, ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಅಕ್ಟೋಬರ್ 10ರಂದು ಸಂಪುಟ ಸಭೆ ನಡೆಯಲಿದ್ದು ಅಂದು ಜಾತಿ ಗಣತಿ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ. ಸಂಪುಟ ಸಭೆಯಲ್ಲಿ ಮಂಡಿಸುವ ಕುರಿತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಸದ್ಯಕ್ಕೆ ಮಾಹಿತಿ ಇಲ್ಲ ವಾದರೂ ಮುಖ್ಯಮಂತ್ರಿಯವರೇ ಖುದ್ದು ಆಸಕ್ತಿ ತೆಗೆದುಕೊಂಡಿದ್ದಾರೆನ್ನಲಾಗಿದೆ.

ಸಿಎಂ ದ್ವಂದ್ವ ನಿಲುವಿಗೆ ಪ್ರತಿಪಕ್ಷ ಆಕ್ಷೇಪ ಬೆಂಗಳೂರು

ಜಾತಿ ಗಣತಿ ವರದಿ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಸಾಮಾ ಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಬಗ್ಗೆ ಗೊಂದಲ ನಿವಾರಿಸಿ, ಸಚಿವ ಸಂಪುಟ ನಂತರ ಸಭೆಯಲ್ಲಿ ಸಾರ್ವಜನಿಕ ಅಂಗೀಕರಿಸಿದ ಚರ್ಚೆಗೆ ಮಂಡಿಸಲಿ ಎಂದು ತನ್ನ ನಿಲುವು ಪ್ರತಿಪಾದಿಸಲು ಚಿಂತನೆ ನಡೆಸಿದೆ. ಮುಡಾ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು, ಅಹಿಂದ ಸಮುದಾಯಗಳ ಅನುಕಂಪ ಗಿಟ್ಟಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹೂಡಿದ ತಂತ್ರ ಇದು ಎಂಬುದು ಕೇಸರಿ ಪಡೆಯ ಅನು ಮಾನ. ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ತೂಗುಗತ್ತಿ ಸರ್ಕಾರದ ಮೇಲೆ ನೇತಾಡುತ್ತಿದೆ. ಆಂತರಿಕವಾಗಿ ಸಾಕಷ್ಟು ವಿರೋಧವು ಸೃಷ್ಟಿಸಿರುವ ‘ಸಂದಿಗ್ಧದಿಂದ ಪಾರಾಗಲು ‘ಜಾತಿ ಗಣತಿ ವರದಿ’ ಗುರಾಣಿ ರೀತಿ ಬಳಸಿಕೊಳ್ಳಲು ಮುಂದಾಗಿರಬಹುದು ಎಂದು ತರ್ಕಿಸುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments