Friday, September 12, 2025
20.8 C
Bengaluru
Google search engine
LIVE
ಮನೆ#Exclusive Newsಫ್ರೀಡಂ ಟಿವಿ ಪ್ರತಿನಿಧಿ ಪತ್ರಕರ್ತ ಗಡಾದ್ ಗೆ ಡಾಕ್ಟರೇಟ್ ಪದವಿ

ಫ್ರೀಡಂ ಟಿವಿ ಪ್ರತಿನಿಧಿ ಪತ್ರಕರ್ತ ಗಡಾದ್ ಗೆ ಡಾಕ್ಟರೇಟ್ ಪದವಿ

ಧಾರವಾಡ: ಕರ್ನಾಟಕ‌ವಿಶ್ವ ವಿದ್ಯಾಲಯದಿಂದ ಹಿರಿಯ ಪತ್ರಕರ್ತ ಬಸವರಾಜ ಗಡಾದ ಪಿ.ಎಚ್.ಡಿ ಪದವಿ ನೀಡಿ ಸನ್ಮಾನ ಮಾಡಲಾಗಿದೆ. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 2023 ನೆಯ ಸಾಲಿನ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ: ಎಂ.ಸಿ. ಸುಧಾಕರ್ ಅವರಿಂದ ಪತ್ರಕರ್ತ ಹಾಗೂ ನ್ಯಾಯವಾದಿ ಬಸವರಾಜ್ ಶಿವಾನಂದಪ್ಪ ಗಡಾದ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಪ್ರಧಾನ ಮಾಡಲಾಯಿತು..
ಮಾಧ್ಯಮ ರಂಗದಲ್ಲಿ ಮೂರು ದಶಕಕ್ಕೂ ಹೆಚ್ಚು ಅವಧಿಗೆ ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯದ ಹೆಸರಾಂತ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಹಾಗೂ ದೂರದರ್ಶನ ಮಾಧ್ಯಮಗಳಾದ ಟಿವಿ9, ಸುವರ್ಣ, ಸಮಯ, ಜನಶ್ರೀಗಳಲ್ಲಿ‌ ಹೈದರಾಬಾದ, ಬೆಂಗಳೂರು, ದೆಹಲಿ‌, ಬೆಳಗಾವಿ, ಹುಬ್ಬಳ್ಳಿಗಳಲ್ಲಿ ಪತ್ರಕರ್ತರಾಗಿ ಸೇವೆ ಮಾಡಿದ್ದಾರೆ. ತಮ್ಮ ಪತ್ರಿಕೋದ್ಯಮದ ಸೇವೆಯೊಂದಿಗೆ ಶಿಕ್ಷಣವನ್ನು ಮುಂದುವರಿಸುತ್ತಾ ಎಲ್‌ಎಲ್‌ಬಿ ಪದವಿ ಪಡೆದು ನ್ಯಾಯವಾದಿಯೂ ಸಹ ಆಗಿದ್ದಾರೆ. ಇವರಿಗೆ ಇದೀಗ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕಾನೂನು ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ವಿಷಯದಲ್ಲಿ ಮಂಡಿಸಲಾದ ಮಹಾಪ್ರಬಂಧಕ್ಕೆ .ಹೆಚ್.ಡಿ. ಪದವಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಅಭಿನಂದನೆ : ಹಿರಿಯ ಪತ್ರಕರ್ತ, ನ್ಯಾಯವಾದಿ ಬಸವರಾಜ ಗಡಾದ ಇವರಿಗೆ ಪಿ.ಎಚ್.ಡಿ‌ ಪಿಎಚ್.ಡಿ ಪ್ರಧಾನ ಮಾಡಿರುವುದಕ್ಕೆ ಅನೇಕ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ.

ಬಸವರಾಜ ಗಡಾದ ಇವರು ಮಾಧ್ಯಮದಲ್ಲಿ ಸೇವೆಯಲ್ಲಿದ್ದು, ಇವರು ಪಿಎಚ್.ಡಿ ಪದವಿ ಪಡೆಯುವ ಮೂಲಕ ಜಿಲ್ಲೆಗೆ , ರಾಜ್ಯಕ್ಕೆ ಕೀರ್ತಿ ತಂದಿದ್ದು ನಮಗೆಲ್ಲ ಹರ್ಷ ತಂದಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ (ಎಐಟಿಯುಸಿ)ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸೀಮ್ ಸಾಬ್ ಸರ್ದಾರ್. ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಗಡ್ಡಿ, ಮೌಲಾ ಹುಸೇನ್ ಹಣಗಿ, ಮಕಬೂಲ್ ರಾಯಚೂರು ಮುಂತಾದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments