Thursday, November 20, 2025
24.6 C
Bengaluru
Google search engine
LIVE
ಮನೆ#Exclusive Newsಮೂಡ ವ್ಯತಿರಿಕ್ತ ತೀರ್ಪು ಬಂದರೂ ಸಿದ್ದು ನಿರಾಳ!

ಮೂಡ ವ್ಯತಿರಿಕ್ತ ತೀರ್ಪು ಬಂದರೂ ಸಿದ್ದು ನಿರಾಳ!

ಬೆಂಗಳೂರು: ಮೂಡ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತೀರ್ಪು ಬಂದಿದ್ದರೂ  ಸಿಎಂ ಕುರ್ಚಿಗೆ ಯಾವುದೇ ಕಂಟಕ ಎದುರಾಗಿಲ್ಲ. ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ಅಚಲವಾಗಿ ನಿಂತಿದ್ದು ಸದ್ಯಕ್ಕೆ ನೀವು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನೆ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ಗಳು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿವೆ. ಜೊತೆಗೆ ಸರ್ಕಾರದ ಇಮೇಜ್ ಹಾಳು ಮಾಡಲು ವ್ಯವಸ್ಥಿತವಾಗಿ ಪ್ರಯತ್ನ ಪಡುತ್ತಿವೆ. ಹಾಗಾಗಿ ಯಾವ ಕಾರಣಕ್ಕೂ ಮೈತ್ರಿ ಪಕ್ಷದ ಒತ್ತಾಯಕ್ಕೆ ಮಣಿಯುವುದಿಲ್ಲ ನೀವು ಮುಖ್ಯಮಂತ್ರಿ ಆಗಿ ಮುಂದುವರೆಯಿರಿ ಎಂದು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಅಭಯ ನೀಡಿದ್ದಾರೆ ಜೊತೆಗೆ ಸಿದ್ದರಾಮಯ್ಯ ಪರ ನಿಲ್ಲುವಂತೆ ಪಕ್ಷದ ಇತರೆ ಮುಖಂಡರಿಗೂ ಸಂದೇಶ ರವಾನೆ ಮಾಡಿದ್ದಾರೆ ಮೊದಲು ಸರ್ಕಾರ ರಚನೆಯಾದ ಸಂದರ್ಭದಲ್ಲಿ ನಡೆದಿದ್ದ ರಹಸ್ಯ ಮಾತುಕತೆಯ ಅನ್ವಯ ನಡೆದುಕೊಳ್ಳಲಾಗುತ್ತದೆ ಯಾವ ಕಾರಣಕ್ಕೂ ವಿಪಕ್ಷಗಳ ಹಣತಿಯಂತೆ ನಡೆಯುವುದಿಲ್ಲ. ಉತ್ತಮ ಆಡಳಿತದತ್ತ ಗಮನಹರಿಸಿ ಎಂದು ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments