Friday, September 12, 2025
27.7 C
Bengaluru
Google search engine
LIVE
ಮನೆವೈರಲ್ ನ್ಯೂಸ್ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಅಸಭ್ಯ ವರ್ತನೆ; ಕಿಸ್‌ ಕೊಟ್ಟ ಫೋಟೋ ವೈರಲ್..!

ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಅಸಭ್ಯ ವರ್ತನೆ; ಕಿಸ್‌ ಕೊಟ್ಟ ಫೋಟೋ ವೈರಲ್..!

ಚಿಕ್ಕಬಳ್ಳಾಪುರ: ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತನ್ನ ಮಗ ವಯಸ್ಸಿನ ಅಪ್ರಾಪ್ತ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿರುವುದಲ್ಲದೇ ಆತನೊಂದಿಗೆ ರೊಮ್ಯಾಟಿಕ್ ಆಗಿ ವರ್ತಿಸಿ ವಿಡಿಯೋ ಹಾಗೂ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ಇತ್ತೀಚೆಗೆ ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಶಾಲಾ ಬಾಲಕನೊಂದಿಗೆ ಮುಖ್ಯ ಶಿಕ್ಷಕಿ ಈ ರೀತಿ ವರ್ತಿಸಿದ್ದು, ಇದೀಗ ಆ ಪೋಟೋಗಳು ಸೋರಿಕೆ ಆಗಿ ವಿದ್ಯಾರ್ಥಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮುಖ್ಯ ಶಿಕ್ಷಕಿ ಪುಪ್ಪಲತಾ ಎಂಬಾಕೆ ಈ ರೀತಿ ತಾನೊಬ್ಬ ಗುರು ಎಂಬುದನ್ನು ಮರೆತು ಶಾಲೆಯ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.

ಈ ವೇಳೆ ಬಾಲಕನೊಂದಿಗೆ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿರುವ ಶಿಕ್ಷಕಿ, ವಿದ್ಯಾರ್ಥಿ ಕೂಡ ಶಿಕ್ಷಕಿಯರನ್ನು ಮುದ್ದಾಡಿದ್ದು, ಶಿಕ್ಷಕಿ ಕೂಡ ಬಾಲಕನಿಗೆ ಕಿಸ್ ಕೊಟ್ಟಿರುವ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಶಿಕ್ಷಕಿಯ ವರ್ತನೆ ಬಗ್ಗೆ ಪೋಷಕರು ಕಿಡಿಕಾರಿದ್ದಾರೆ. ಅಲ್ಲದೇ ಬುಧವಾರ ಬೆಳಗ್ಗೆ ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಪೋಷಕರು ಕೂಡ ಶಾಲೆ ಬಳಿ ತೆರಳಿ ಶಿಕ್ಷಕಿ ವಿರುದ್ದ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಘಟನೆಯ ಬಗ್ಗೆ ಶಾಲೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments